Monday, January 24, 2011
0
Monday, January 24, 2011
ಡಾ.ಶ್ರೀಧರ ಎಚ್.ಜಿ.
ಪಂಪನ ಆದಿಪುರಾಣ - 2
ರಾಜಾ ಪ್ರತ್ಯಕ್ಷ ದೇವತಾ ಎಂಬುದು ಜನಪ್ರಿಯ ಮಾತು. ಆಳುವ ವರ್ಗದ ಬದುಕಿನ ಮಾದರಿಗಳು ಅನುಕರಣೀಯವಾಗಿರಬೇಕು ಎಂಬಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಹದಿನಾಲ್ಕು ಜನ ಮನುಗಳ ವ್ಯವಸ್ಥಿತ ಆಡಳಿತದ ಕಾರ್ಯವೈಖರಿಯನ್ನು ನೀಡುವಲ್ಲಿ ಕವಿ ಆದರ್ಶ ರಾಜನ ಮಾದರಿಯೊಂದನ್ನು ನೀಡಿರುವಂತಿದೆ. ಈ ಬಗೆಯ ವಿವರಣೆಯ ಮೂಲಕ ತನ್ನ ಕಾಲದ ರಾಜಪ್ರಭುತ್ವದ ಕರ್ತವ್ಯಗಳನ್ನು ಪಂಪ ಎಚ್ಚರಿಸುವಂತಿದೆ. ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಮುಂ ಎಂಬ ಘೋಷಿತ ನಿಲುವಿನಲ್ಲಿ, ಪಂಪನ ಕಾವ್ಯ ಪ್ರಜ್ಞೆ ದ್ವಿಮುಖವಾಗಿದೆ ಎಂದು ಹೊರನೋಟಕ್ಕೆ ಅನಿಸುವುದು...
Read more...
Sunday, January 16, 2011
0
Sunday, January 16, 2011
ಡಾ.ಶ್ರೀಧರ ಎಚ್.ಜಿ.
ಪಂಪನ ಆದಿಪುರಾಣಂ - ಧಾರ್ಮಿಕ ಮೌಲ್ಯ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಂಪನ ಎರಡೂ ಕೃತಿಗಳನ್ನು ಎಂ.ಎ. ತರಗತಿಯಲ್ಲಿ ಪಠ್ಯವಾಗಿ ಓದುವ ಕಾಲಕ್ಕೆ ಇಡಿಯಾಗಿ ಆದಿಪುರಾಣವನ್ನು ಅನಿವಾರ್ಯವಾಗಿ ಓದಿದ್ದೆ. ಅನಂತರ ಡಾಕ್ಟರೇಟ್ ಪದವಿಯ ಅಧ್ಯಯನದ ಸಂದರ್ಭದಲ್ಲಿ ಓದಿದ್ದೆ. ಈಗ ಮತ್ತೊಮ್ಮೆ ಓದಿದೆ. ಆದರೆ ಈ ಮೂರೂ ಓದುಗಳು ಬೇರೆಬೇರೆಯಾಗಿ ನಿಂತವು. ಮೊದಲ ಸಲ ಅದಾಗಲೇ ಬಂದಿದ್ದ ವಿಮರ್ಶೆಯ ಮಾರ್ಗದರ್ಶನದಲ್ಲಿ, ಎರಡನೆಯ ಸಲ ನಿರ್ದಿಷ್ಟ ಭಾಗಗಳನ್ನು ಕೇಂದ್ರೀಕರಿಸಿದ ಓದುಗಳಾಗಿದ್ದವು. ಮೂರನೆಯ ಸಲದ ಈ ಓದು ನನ್ನೊಳಗೆ ಸೃಷ್ಟಿಸಿದ ಆಲೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅಪೇಕ್ಷೆ...
Read more...
Tuesday, January 4, 2011
0
Tuesday, January 4, 2011
ಡಾ.ಶ್ರೀಧರ ಎಚ್.ಜಿ.
ಪ್ರಾಚೀನ ಕಾಲದ ಜನತಾನ್ಯಾಯಾಲಯದ ಆಧುನಿಕ ರೂಪ ಲೋಕದಾಲತ್
ಸಂಚಾರಿ ನ್ಯಾಯಾಲಯ ಅತ್ಯುತ್ತಮವಾದ ಕಲ್ಪನೆ. ಬದುಕಿನಲ್ಲಿ ಕಾನೂನಿನ ವ್ಯಾಪ್ತಿಗೆ ಬರದ ಯಾವ ಸಂಗತಿಯೂ ಇಲ್ಲ. ಆದ್ದರಿಂದ ಜನಸಾಮಾನ್ಯರೆಲ್ಲರೂ ಕಾನೂನಿನ ಅರಿವನ್ನು ಪಡೆದುಕೊಳ್ಳಬೇಕು. ಪ್ರಾಚೀನ ಕಾಲದ ಜನತಾ ನ್ಯಾಯಾಲಯಕ್ಕೆ ಆಧುನಿಕ ರೂಪವನ್ನು ಲೋಕ ಅದಾಲತ್‌ನಲ್ಲಿ ನೀಡಲಾಗಿದೆ ಎಂದು ಶ್ರೀಮತಿ ಅನಿತ ಎನ್. ಪಿ. ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಪುತ್ತೂರು ಇವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ತಾಲೂಕುಕಾನೂನು ಸೇವಾ ಸಮಿತಿ ಪುತ್ತೂರು ಮತ್ತು ಜಿಲ್ಲಾಡಳಿತ, ವಕೀಲರ...
Read more...
0
ಡಾ.ಶ್ರೀಧರ ಎಚ್.ಜಿ.
ವಿವೇಕಾನಂದ ಕಾಲೇಜಿಗೆ ನ್ಯಾಕ್ ತಂಡದ ಭೇಟಿ - ಜನವರಿ 28 ಮತ್ತು 29
ಜನವರಿ ೨೮ ಮತ್ತು ೨೯ರಂದು ಬಹುನಿರೀಕ್ಷಿತ ನ್ಯಾಕ್ ತಂಡ ಕಾಲೇಜಿಗೆ ಭೇಟಿ ನೀಡಲಿದೆ. ಈ ಬಗೆಗೆ ಅಧಿಕೃತವಾಗಿ ದಿನಾಂಕ ಪ್ರಕಟವಾಗಿದೆ. ೨೦೦೪ರಲ್ಲಿ ವಿವೇಕಾನಂದ ಕಾಲೇಜು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿ ಬಿ + + ಶ್ರೇಯಾಂಕವನ್ನು ಪಡೆದಿತ್ತು. ಇದಾಗಿ ಆರು ವರ್ಷಗಳು ಸಂದಿವೆ. ನೇತ್ರಾವತಿಯಲ್ಲಿ ನೀರು ಸಾಕಷ್ಟು ಹರಿದಿದೆ. ೨೦೦೪ರಲ್ಲಿ ಪ್ರಿನ್ಸಿಪಾಲರಾಗಿದ್ದ ಡಾ. ಬಿ. ಶ್ರೀಧರ ಭಟ್ ನಿವೃತ್ತರಾಗಿದ್ದಾರೆ. ಅನಂತರ ಪ್ರಿನ್ಸಿಪಾಲರಾದ ಪ್ರೊ. ಆರ್. ವೇದವ್ಯಾಸ ಇವರೂ ನಿವೃತ್ತರಾಗಿದ್ದಾರೆ. ಪ್ರಸ್ತುರ ಡಾ. ಎಚ್. ಮಾಧವ ಭಟ್ ಪ್ರಿನ್ಸಿಪಾಲರಾಗಿದ್ದು...
Read more...
1
ಡಾ.ಶ್ರೀಧರ ಎಚ್.ಜಿ.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿ ಡಾ| ಎಚ್.ಮಾಧವ ಭಟ್

ಹಲವು ಸಮಯದಿಂದ ಹೇಳಬೇಕೆಂದುಕೊಂಡ ಸುದ್ದಿಯೊಂದು ಹೇಳದೇ ಉಳಿದುಹೋಗಿದೆ. ಹೀಗಾಗಿ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ, ಅಭಿಮಾನಿಗಳಿಗೆ ತಡವಾಗಿ ಒಂದು ಸುದ್ದಿಯನ್ನು ಹೇಳುತ್ತಿದ್ದೇನೆ. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ| ಎಚ್. ಮಾಧವ ಭಟ್ ಇವರು ಜುಲೈ ೩೧ ರಿಂದ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಮೂಲತ: ಉಡುಪಿ...
Read more...
Sunday, January 2, 2011
1
Sunday, January 2, 2011
ಡಾ.ಶ್ರೀಧರ ಎಚ್.ಜಿ.
ನಮ್ಮ ತಂದೆ ಮುಂಡಿಗೆಹಳ್ಳಕ್ಕೆ ವಲಸೆ ಬಂದದ್ದು
ಹಿರಿಯ ಮಗ ನಾರಾಯಣಪ್ಪನಿಗೆ ಕೌಲಕೋಡಿನಿಂದ ಮದುವೆಯಾಯಿತು. ಇದಾಗಿ ಒಂದೆರಡು ವರ್ಷಕ್ಕೆ ಎರಡನೆಯ ಮಗ ಗಣಪತಿಗೆ ಖಂಡಿಕದ ದಾರಿಯಲ್ಲಿ ಸಿಗುವ ಕಲ್ಮಕ್ಕಿಯ ಹೊಸೊಕ್ಕಲು ನಾರಾಯಣಪ್ಪನ ಮಗಳು ಸರೋಜಳೊಂದಿಗೆ ವಿವಾಹವಾಯಿತು. ಇಲ್ಲಿ ಹೊಸೊಕ್ಕಲು ಎಂದರೆ ಹೊಸದಾಗಿ ಬಂದವರು ಎಂದರ್ಥ. ಕಲ್ಮಕ್ಕಿಗೆ ಇವರು ದೂರದ ಹೊನ್ನಾವರ ಸಮೀಪದ ಶರಾವತಿ ನದಿ ದಂಡೆಯಲ್ಲಿರುವ ಹಡಿನಬಾಳದಿಂದ ವಲಸೆ ಬಂದಿದ್ದರು. ಜೀವನೋಪಾಯಕ್ಕೆ ಖಂಡಿಕದ ರಾಮಭಟ್ಟರ ತೋಟವನ್ನು ಗೇಣಿಗೆ ಮಾಡಿಕೊಂಡಿದ್ದರು. ನನ್ನ ಅಪ್ಪ ಗಣಪತಿಗೆ ಮದುವೆಯಾದಾಗ ಹದಿನಾರು ವರ್ಷ. ಅದೇ ರೀತಿ ಅಮ್ಮ...
Read more...
0
ಡಾ.ಶ್ರೀಧರ ಎಚ್.ಜಿ.
ಪುತ್ತೂರಿನಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು - ವಿಚಾರ ಸಂಕಿರಣ
ಕರಾವಳಿ ಲೇಖಕಿ - ವಾಚಕಿಯರ ಸಂಘ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಜನವರಿ ೮ ಮತ್ತು ೯ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಬೈಂದೂರು ಪ್ರಭಾಕರರಾವ್ ಸಭಾಭವನದಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು ಎಂಬ ವಿಚಾರ ಸಂಕಿರಣವನ್ನು ಆಯೋಜಿಸಿವೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಈ ವಿಚಾರ ಸಂಕಿರಣದಲ್ಲಿ ನಾಡಿನ ಹಲವು ಖ್ಯಾತ ಸಾಹಿತಿಗಳು ಮತ್ತು ಚಿಂತಕರು ಭಾಗವಹಿಸಲಿದ್ದಾರೆ....
Read more...
0
ಡಾ.ಶ್ರೀಧರ ಎಚ್.ಜಿ.
ತಿಂಗಳ ತರಂಗ - ಜನವರಿ ೨೦೧೧
೧೪ನೆಯ ಶತಮಾನದಿಂದಲೇ ತುಳು ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿದೆ. ಆದರೆ ರಾಜಕೀಯಬಲ ಇಲ್ಲದಿರುವುದರಿಂದ ತುಳು ಲಿಪಿಗೊಂದು ಅಸ್ತಿತ್ವ ಸಿಗಲಿಲ್ಲ. ಅರುಣಾಬ್ಜನ ತುಳು ಭಾರತ ತುಳು ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಕೃತಿ. ತುಳು ಭಾರತದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮರಳಿ ಕಟ್ಟಲು ಬೇಕಾದ ಅಂಶಗಳಿವೆ ಎಂದು ಉಪನ್ಯಾಸಕ ಡಾ. ಧನಂಜಯ ಕುಂಬ್ಳೆ ಹೇಳಿದರು. ಅವರು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಅರುಣಾಬ್ಜನ ತುಳು ಭಾರತೋ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು....
Read more...
Subscribe to:
Posts (Atom)