Monday, December 27, 2010
0
Monday, December 27, 2010
ಡಾ.ಶ್ರೀಧರ ಎಚ್.ಜಿ.
ಕ್ವಾಟ : ಶಬ್ದಲೋಕ
ಕ್ವಾಟ ಎಂದರೇನು ಗೊತ್ತೇ ? ಗೊತ್ತಿಲ್ಲದಿದ್ದರೆ ಮುಂದೆ ಓದಿ. ಮಲೆನಾಡಿನಲ್ಲಿ ಈ ಸಲ ಒಳ್ಳೆಯ ಚಳಿ ಬಿದ್ದಿದೆ. ಒಂದು ರೀತಿಯಲ್ಲಿ ಕಿತ್ತು ತಿನ್ನುವ ಚಳಿ ಎಂದರೂ ತಪ್ಪಿಲ್ಲ. ಹಾಗೆ ನೋಡಿದರೆ ನನು ಇರುವ ಪುತ್ತೂರಿನಲ್ಲಿಯೂ ಈಸಲ ಸಾಕಷ್ಟು ವಾಡಿಕೆಗಿಂತ ಹೆಚ್ಚಿನ ಚಳಿ ಇದೆ. ಮಲೆನಾಡಿನಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಬಳಸುವ ಒಂದು ಅಪರೂಪದ ಶಬ್ದ ಕ್ವಾಟ. ಹೀಗೆ ಹೇಳಿದರೆ ಅರ್ಥವಾಗಲಿಕ್ಕಿಲ್ಲ. ಚಳಿಗಾಲದಲ್ಲಿ ಮುಂಜಾನೆ ಮುಖತೊಳೆಯುವುದು, ಕೈಕಾಲಿಗೆ ತಣ್ಣನೆಯ ನೀರು ಸುರಿದುಕೊಳ್ಳುವುದು ಒಂದು ರೀತಿ ರೋಮಾಂಚನ ನೀಡುವ ಅನುಭವ....
Read more...
0
ಡಾ.ಶ್ರೀಧರ ಎಚ್.ಜಿ.
ಪ್ರೊ. ಮಾಲತಿ ಪಟ್ಟಣ ಶೆಟ್ಟಿಗೆ ನಿರಂಜನ ಪ್ರಶಸ್ತಿ

ಇಲ್ಲಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ಪ್ರತಿ ವರ್ಷ ನೀಡುವ ನಿರಂಜನ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ ಪ್ರೊ. ಮಾಲತಿ ಪಟ್ಟಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಜನವರಿ ೯ರಂದು ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಥೆ, ಕವಿತೆ, ಸಂಪಾದನೆ, ವಿಮರ್ಶೆ, ಭಾಷಾಂತರ ಮೊದಲಾದ ಸಾಹಿತ್ಯಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನಿರಂಜನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ....
Read more...
Thursday, December 16, 2010
3
Thursday, December 16, 2010
ಡಾ.ಶ್ರೀಧರ ಎಚ್.ಜಿ.
ಶಬ್ದಗಳೊಂದಿಗೆ ಸಲ್ಲಾಪ :
ವಬ್ಬೆ: ಹವ್ಯಕ ಭಾಷೆಯಲ್ಲಿ ಬಳಕೆಯಲ್ಲಿರುವ ಅಪರೂಪದ ಪದವಿದು. ಇತ್ತೀಚೆಗೆ ಊರಿಗೆ ಹೋದಾಗ ಮಾತಿನ ನಡುವೆ ಈ ಪದ ಬಂದುಹೋಯಿತು. ಅವತ್ತು ಮನೆಯಲ್ಲಿ ಬೆಳಗಿನ ತಿಂಡಿಗೆ ಇಡ್ಲಿಮಾಡಿದ್ದರು. ತಿಂಡಿ ಬಹುತೇಕ ಮುಗಿಯುತ್ತ ಬಂದಿತ್ತು. ಅಮ್ಮ ಮಾತನಾಡುವಾಗ ”ಇನ್ನೊಂದು ವಬ್ಬೆ ಇಡ್ಲಿ ಮಾಡಿದರೆ ಸಾಕು” ಎಂದರು. ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಇಲ್ಲಿ ’ವಬ್ಬೆ’ ಎಂದರೆ ’ಒಂದು ಸಲ, ಒಂದು ಬಾರಿ’ ಎಂದು ಅರ್ಥ. ಎಲ್ಲ ಸಂದರ್ಭಗಳಲ್ಲಿ ಈ ಪದ ಬಳಕೆಯಾಗುವುದಿಲ್ಲ. ತಿಂಡಿಗೆ ಸಂಬಂಧಿಸಿ ಈ ಪದ ಹೆಚ್ಚು ಬಳಕೆಯಾಗುತ್ತದೆ. ಅದರಲ್ಲಿಯೂ ಏಕ ಕಾಲಕ್ಕೆ...
Read more...
0
ಡಾ.ಶ್ರೀಧರ ಎಚ್.ಜಿ.
ನೆನಪಿನಂಗಳ ೪ - ಹಿರಿಯರ ಹೆಜ್ಜೆ ಗುರುತು
ಈಗ ಗೊತ್ತಿರುವ ಮಟ್ಟಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಹೆಗ್ಗಾರಳ್ಳಿ ನಮ್ಮ ಮೂಲ ಸ್ಥಳ. ಆ ಊರಿನಲ್ಲಿ ನಮ್ಮ ಬಂಧುಗಳು ಈಗ ಯಾರಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಹೆಗ್ಗಾರಳ್ಳಿ ಮನೆತನ ಎಂಬ ಹೆಸರು ಮಾತ್ರ ಈಗಲೂ ಉಳಿದುಕೊಂಡು ಬಂದಿದೆ. ನಮ್ಮ ಹೆಸರಿನ ಮುಂದಿರುವ ಎಚ್. ಎಂದರೆ ಹೆಗ್ಗಾರಳ್ಳಿ ಎಂದರ್ಥ. ಆದರೆ ನಾನು ಮಾತ್ರ ಇದುವರೆಗೆ ಹೆಗ್ಗಾರಳ್ಳಿಯ ಮುಖ ನೋಡಿದವನಲ್ಲ. ನಮ್ಮ ಅಜ್ಜನ ತಂದೆಯ ಕಾಲಕ್ಕೆ ಸಾಗರ ತಾಲೂಕಿನ ಶಿರವಂತೆ ಸಮೀಪದ ಸಾಲೆಕೊಪ್ಪಕ್ಕೆ ವಲಸೆ ಬಂದರು. ಅಜ್ಜನ ತಂದೆಯ ಹೆಸರು ನಾರಾಯಣಪ್ಪ. ನನ್ನ...
Read more...
Sunday, December 5, 2010
0
Sunday, December 5, 2010
ಡಾ.ಶ್ರೀಧರ ಎಚ್.ಜಿ.
ನೆನಪಿನಂಗಳ - ೩ : ಆಲಳ್ಳಿ ಶಾಲೆಯಲ್ಲಿ ಅಕ್ಷರದ ಬೆಳಕು
ಶಾಲೆ ಎಂದರೆ ಒಂದು ಕೊಠಡಿ; ಒಬ್ಬರು ಅಧ್ಯಾಪಕರು. ಅವರೇ ಶಾಲೆಯ ಹೆಡ್‌ಮಾಸ್ಟರ್, ಮಾಸ್ಟ್‌ರ್ ಮತ್ತು ಕ್ಲಾರ್ಕ್ ಕಮ್ ಜವಾನ. ಆಲ್ ಇನ್ ಒನ್. ಒಂದರಿಂದ ನಾಲ್ಕನೆಯ ತರಗತಿಯ ವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿದ್ದೆವು. ನಾವು ಜನಗಣಮನ ಹೇಳುವುದರೊಂದಿಗೆ ಶಾಲೆ ಆರಂಭವಾಯಿತು. ಮೇಸ್ಟ್ರು ಖುರ್ಚಿಯಲ್ಲಿ ಆಸೀನರಾದರು. ನನ್ನ ಹೆಸರನ್ನು ಒಂದನೆ ತರಗತಿಯ ಹಾಜರಿ ಪುಸ್ತಕದಲ್ಲಿ ಕ್ರಮವತ್ತಾಗಿ ಬರೆದರು. ನಮ್ಮ ಶಾಲೆಯಲ್ಲಿ ಒಟ್ಟು ಸುಮಾರು ೨೦ ರಿಂದ ೨೫ ವಿದ್ಯಾರ್ಥಿಗಳು ಇದ್ದ ನೆನಪು. ತರಗತಿಯ ಆರಂಭದ ದ್ಯೋತಕವಾಗಿ ಎಲ್ಲಾ ತರಗತಿಯ ವಿದ್ಯಾರ್ಥಿಗಳ...
Read more...
Saturday, December 4, 2010
0
Saturday, December 4, 2010
ಡಾ.ಶ್ರೀಧರ ಎಚ್.ಜಿ.
ನೆನಪಿನಂಗಳದಲ್ಲಿ ಆಲಳ್ಳಿ ಶಾಲೆ . . .
ಸಾಲೆಕೊಪ್ಪದಿಂದ ಸ್ಕೂಲಿಗೆ ಹೋಗುವುದಿಲ್ಲವೆಂದು ಮನೆಗೆ ಬಂದ ಮೇಲೆ ಹೊಸ ಸಮಸ್ಯೆ ತಲೆದೋರಿತು. ಇವನನ್ನು ಎಲ್ಲಿ ಶಾಲೆಗೆ ಸೇರಿಸುವುದೆಂದು ಮನೆಯವರು ತಲೆಕೆಡಿಸಿಕೊಂಡರು. ಹೊರಗೆ ಎಲ್ಲಿಯೂ ಬಿಡುವಂತಿಲ್ಲ. ಮನೆಯ ಹತ್ತಿರ ಶಾಲೆಯಿಲ್ಲ. ಇರುವ ಒಂದೇ ಒಂದು ಆಯ್ಕೆಯೆಂದರೆ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಕಳಿಸುವುದು. ಆದರೆ ಅದೂ ಸಹ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆಲಳ್ಳಿಯ ಶಾಲೆಗೆ ಮನೆಯಿಂದ ಹೋಗುವುದಕ್ಕೆ ಎರಡು ದಾರಿಗಳಿದ್ದವು. ನೇರವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಮೊದಲನೆಯದು. ಮನೆಯ...
Read more...
Subscribe to:
Posts (Atom)