Thursday, December 16, 2010

3

ಶಬ್ದಗಳೊಂದಿಗೆ ಸಲ್ಲಾಪ :

  • Thursday, December 16, 2010
  • ಡಾ.ಶ್ರೀಧರ ಎಚ್.ಜಿ.
  • Share


  • ವಬ್ಬೆ: ಹವ್ಯಕ ಭಾಷೆಯಲ್ಲಿ ಬಳಕೆಯಲ್ಲಿರುವ ಅಪರೂಪದ ಪದವಿದು. ಇತ್ತೀಚೆಗೆ ಊರಿಗೆ ಹೋದಾಗ ಮಾತಿನ ನಡುವೆ ಈ ಪದ ಬಂದುಹೋಯಿತು. ಅವತ್ತು ಮನೆಯಲ್ಲಿ ಬೆಳಗಿನ ತಿಂಡಿಗೆ ಇಡ್ಲಿಮಾಡಿದ್ದರು. ತಿಂಡಿ ಬಹುತೇಕ ಮುಗಿಯುತ್ತ ಬಂದಿತ್ತು. ಅಮ್ಮ ಮಾತನಾಡುವಾಗ ”ಇನ್ನೊಂದು ವಬ್ಬೆ ಇಡ್ಲಿ ಮಾಡಿದರೆ ಸಾಕು” ಎಂದರು. ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಇಲ್ಲಿ ’ವಬ್ಬೆ’ ಎಂದರೆ ’ಒಂದು ಸಲ, ಒಂದು ಬಾರಿ’ ಎಂದು ಅರ್ಥ.

    ಎಲ್ಲ ಸಂದರ್ಭಗಳಲ್ಲಿ ಈ ಪದ ಬಳಕೆಯಾಗುವುದಿಲ್ಲ. ತಿಂಡಿಗೆ ಸಂಬಂಧಿಸಿ ಈ ಪದ ಹೆಚ್ಚು ಬಳಕೆಯಾಗುತ್ತದೆ. ಅದರಲ್ಲಿಯೂ ಏಕ ಕಾಲಕ್ಕೆ ಒಂದಕ್ಕಿಂತ ಹೆಚ್ಚು ಮಾಡುವ ತಿಂಡಿಗಳಿಗೆ ಈ ಪದವನ್ನು ಬಳಸುವರು. ಇಡ್ಲಿಯನ್ನು ಹೊರತು ಪಡಿಸಿದರೆ ಒಂದು ವಬ್ಬೆ ಸುಟ್ಟವ್ವು, ಒಂದು ವಬ್ಬೆ ವಡೆ ಮುಂತಾದವುಗಳನ್ನು ಹೇಳುವಾಗ ಈ ಪದ ಬಳಕೆಯಲ್ಲಿದೆ. ಹಾಗೆಯೇ ಹಿಂದಿನ ಕಾಲದಲ್ಲಿ ಅವಲಕ್ಕಿಯನ್ನು ಕುಟ್ಟಿ ಮಾಡಿಕೊಳ್ಳ ಬೇಕಾಗಿತ್ತು. ಆಗಲೂ ’ಇನ್ನು ಒಂದು ವಬ್ಬೆ ಅವಲಕ್ಕಿ ಮಾಡಿದರೆ ಆಯಿತು’ ಎಂಬಲ್ಲಿ ಈ ಪದ ಬಳಕೆಯಾಗುತ್ತಿತ್ತು.

    ದಕ್ಷಿಣ ಕನ್ನಡದಲ್ಲಿ ಈ ಪದಕ್ಕೆ ಸಮನಾಗಿ ಬೇರೆ ಪದ ಬಳಕೆಯಲ್ಲಿ ಇದ್ದಂತಿಲ್ಲ. ಆದರೆ ಉತ್ತರ ಕನ್ನಡದಲ್ಲಿ ಇದಕ್ಕೆ ಹುಬ್ಬೆ ಎಂಬ ಪದವನ್ನು ಬಳಸುತ್ತಾರೆ.

    3 Responses to “ಶಬ್ದಗಳೊಂದಿಗೆ ಸಲ್ಲಾಪ :”

    ವೆಂಕಟಕೃಷ್ಣ ಕೆ ಕೆ ಪುತ್ತೂರು said...
    December 16, 2010 at 7:55 PM

    ಈ ರೀತಿಯ ಅಪರೂಪದ ,ಈಗ ಬಳಕೆಯಲ್ಲಿಲ್ಲದ ಶಬ್ದಗಳ ಬಗ್ಗೆ ಇನ್ನೂಹೆಚ್ಚು ಬೆಳಕು ಚೆಲ್ಲಿ..

    ತುಂಬಾ ಆಸಕ್ತಿದಾಯಕ ವಿಚಾರ!
    ಈ ಸಂಗತಿಯನ್ನು Face bookನ havyaka Group ನಲ್ಲಿ ಹಂಚಿಕೊಂಡರೆ ತಮ್ಮ ಅಡ್ಡಿಯಿಲ್ಲ ಅಂತ ತಿಳಿಯಲೇ..?


    divine rudraksh said...
    December 18, 2010 at 11:49 AM

    Hosa ( Hale) havyaka pada nodi kushi aathu..Dhanyavadagalu.


    Anonymous said...
    December 20, 2010 at 10:07 PM

    ಇಲ್ಲಿನ ಬರಹಗಳು ಬೌದ್ಧಿಕ ತಿನಿಸು ಎಂಬರ್ಥದಲ್ಲಿ ಗುರುತಿಸಿದ್ದಾದರೆ ‘ವಬ್ಬೆ’ಯನ್ನು ಬಳಸಬಹುದೋ ಎಂದು ಅಲ್ಲಿ ಇಲ್ಲಿ ಹೆಕ್ಕಿ, ಬಿಡಿಸಿ ಚಪ್ಪರಿಸುತ್ತಾ ಹೋದೆ. ಊಹುಂ, ಡಿಸೆಂಬರ್ ೨೫, ೨೦೦೯ಕ್ಕೆ ಜಾಲಕ್ಕೇರಿದ ಮೊದಲ ಲೇಖನದವರೆಗೂ ಹೋಗಿಬಂದೆ. ಈಗ ಅದಕ್ಕೆ ಸಂವಾದಿಯಂತೆ ತೋರುವ ಶಬ್ದ ಬಳಸುತ್ತೇನೆ - ಯಬ್ಬೆ! ನಿಮ್ಮ ಬ್ಲಾಗ್ ಲೇಖನಿಗೆ ಒಂದು ವರ್ಷವೇ ತುಂಬುತ್ತ ಬಂತಲ್ಲಾ! ಅದಕ್ಕಾದರೂ ಅಭಿನಂದನೆ ಹೇಳಿ, ಬರಹ ನಿರಂತರವಾಗಿರಲಿ, ಮುಂದೆ ಹೆಚ್ಚು ಸಚಿತ್ರವೂ ಆಗಲಿ ಎಂದೂ ಹಾರೈಸಿ ವಿರಮಿಸುತ್ತೇನೆ.
    ಅಶೋಕವರ್ಧನ


    Subscribe