Sunday, August 22, 2010

7

ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ?

  • Sunday, August 22, 2010
  • ಡಾ.ಶ್ರೀಧರ ಎಚ್.ಜಿ.
  • ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಅಲ್ಲಿನ ಏಕಾಂತದಲ್ಲಿ ಚಿತ್ರ ವಿಚಿತ್ರ ಆಲೋಚನೆಗಳು ನೆನಪುಗಳು ಬರುತ್ತಿದ್ದವು. ಇಂತಹ ಒಂದು ಸಂದರ್ಭದಲ್ಲಿ ಪಕ್ಕನೆ ನಡೆದ ಈ ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಹೊಳೆದು ಹೋತು. ತುಸು ಹೊತ್ತಿನ ನಂತರ ಈ ಭಾವನೆ ಮತ್ತಷ್ಟು ಗಾಢವಾಗಿ ಕಾಡತೊಡಗಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ!. ಇಲ್ಲಿನ ನೆಹರು ನಗರದಲ್ಲಿ ನಾರಾಯಣ ಕಂಗಿಲ ಎಂಬ ಸ್ನೇಹಿತರಿದ್ದಾರೆ. ಅವರು ಬ್ಯಾಂಕಿನ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿಯನ್ನು ಪಡೆದವರು. ಸಾಹಿತ್ಯದಲ್ಲಿ ಅಭಿರುಚಿಯುಳ್ಳವರು....
    Read more...
    0

    ಆಸ್ಪತ್ರೆಯ ದಿನಚರಿ

  • ಡಾ.ಶ್ರೀಧರ ಎಚ್.ಜಿ.
  • ನನ್ನ ನೆನಪಿನಂತೆ ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರಿನಲ್ಲಿ ಆರಂಭವಾಗಿ ಸುಮಾರು ಹನ್ನೆರಡು ವರ್ಷವಾಗಿರಬೇಕು. ಪೇಟೆಗೆ ತುಂಬಾ ಹತ್ತಿರವಾಗಿದ್ದರೂ ಹಸಿರಿನ ನಡುವೆ ಇದೆ. ಹಿತಕರವಾದ ವಾತಾವರಣ. ಬಂದು ಹೋಗುವ ವಾಹನದ ಸದ್ದನ್ನು ಹೊರತುಪಡಿಸಿದರೆ ಮೌನವೇ ಅಲ್ಲಿನ ಮಾತು. ಇಲ್ಲಿನ ವ್ಯವಸ್ಥೆ ಮತ್ತು ಸೇವೆಯ ಬಗೆಗೆ ಒಂದೆರಡು ಮಾತುಗಳನ್ನು ಹೇಳದಿದ್ದರೆ ಲೋಪವಾಗುತ್ತದೆ. ಆಸ್ಪತ್ರೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಡಾ. ರಾಜೇಶ್ವರಿ ಪಡಿವಾಳ್ ಸ್ವತ: ವೈದ್ಯರು. ಅವರಿಗೆ ರೋಗಿಗಳ ಮನೋಧರ್ಮದ ಅರಿವಿದೆ. ಪ್ರತಿದಿನ ಮುಂಜಾನೆ ಸುಮಾರು ೬.೩೦...
    Read more...

    Sunday, August 8, 2010

    2

    ಆಪರೇಶನ್ ಆದ ಮೊದಲ ರಾತ್ರಿ !

  • Sunday, August 8, 2010
  • ಡಾ.ಶ್ರೀಧರ ಎಚ್.ಜಿ.
  • ನನ್ನನ್ನು ಕೊಠಡಿಗೆ ತಂದು ಮಲಗಿಸಿದರು. ಅನಸ್ತೇಶಿಯಾದ ಪ್ರಭಾವ ಇರುವುದರಿಂದ ಕಾಲುಗಳು ನನ್ನ ಸ್ವಾಧೀನದಲ್ಲಿರಲಿಲ್ಲ. ವಿಪರೀತ ಭಾರ. ಕಬ್ಬಿಣದ ತೊಲೆಗಳಂತಿದ್ದವು. ೮ ಗಂಟೆಯ ನಂತರ ಸ್ವಲ್ಪ ನೀರು ಕುಡಿಯಿರಿ. ವಾಂತಿ ಆಗದಿದ್ದರೆ ಆಹಾರ ಸೇವಿಸಬಹುದು ಎಂದು ಸಿಸ್ಟರ್ ಹೇಳಿದರು. ಆಗಿನ್ನೂ ೬.೩೦ರ ಸಮಯ. ಇನ್ನೂ ಒಂದೂವರೆ ಗಂಟೆ ನೀರು ಕುಡಿಯದೆ ಇರಬೇಕಲ್ಲ ಎಂದು ತಳಮಳವಾಯಿತು. ವಿಪರೀತ ಬಾಯಾರಿಕೆ. ಸುಮಾರು ೭.೩೦ರ ಹೊತ್ತಿಗೆ ಒಂದು ಗುಟುಕು ನೀರನ್ನು ಧೈರ್ಯ ಮಾಡಿ ಕುಡಿದೆ. ದೇವರ ದಯೆ, ವಾಂತಿಯಾಗಲಿಲ್ಲ. ೮.೩೦ರ ಹೊತ್ತಿಗೆ ಮನೆಯಿಂದ ತಂದ...
    Read more...

    Sunday, August 1, 2010

    1

    ಆಪರೇಷನ್ ಥಿಯೇಟರ್ ಎಂಬ ಜೀವಲೋಕ . . . .

  • Sunday, August 1, 2010
  • ಡಾ.ಶ್ರೀಧರ ಎಚ್.ಜಿ.
  • ನಾನು ನೋಡುತ್ತಿದ್ದೆ. ಮೊದಲ ಮಹಾದ್ವಾರವನ್ನು ದಾಟಿದಾಕ್ಷಣ ನಮ್ಮ ಟ್ರಾಲಿ ನಿಂತಿತು. ಒಂದೈದು ನಿಮಿಷದಲ್ಲಿ ಬಂದ ಪುರುಷನೊಬ್ಬ ಆಪರೇಶನ್ ಮಾಡುವ ಕಾಲನ್ನು ಚೊಕ್ಕಟವಾಗಿ ಸರಸರನೆ ಶೇವಿಂಗ್ ಮಾಡಿದ. ಈ ಪ್ರಕ್ರಿಯೆಗೆ ಅಲ್ಲಿದ್ದ ಇಬ್ಬರು ಸಿಸ್ಟರ್‌ಗಳು ಸಹಕರಿಸುತ್ತಿದ್ದರು. ಇಲ್ಲಿ ಫ್ಯಾನಿನ ವ್ಯವಸ್ಥೆ ಇರಲಿಲ್ಲ. ಸಹಜವಾದ ಗಾಳಿ ಬರಲು ಅವಕಾಶವಿರಲಿಲ್ಲ. ಈ ಹೊತ್ತಿಗೆ ನನಗೆ ಸೆಖೆಯಾಗಿ ಬೆವರತೊಡಗಿತ್ತು. ಅನಂತರ ಅದೇ ಕಾಲಿಗೆ ಸ್ನಾನ ಮಾಡಿಸಿದರು. ಅಲ್ಲಿದ್ದ ಮೂವರೂ ಮಲೆಯಾಳಂ ಮಾತೃಭಾಷೆಯವರು. ನನ್ನಲ್ಲಿ ಮಾತನಾಡುವಾಗ ಅವರದು ಮಲೆಯಾಳಿ...
    Read more...
    0

    ಮಹಾವೀರ ಮೆಡಿಕಲ್ ಸೆಂಟರ್ ಮತ್ತು ಕೊಠಡಿ ಸಂಖ್ಯೆ ೧೧೦ . . . .

  • ಡಾ.ಶ್ರೀಧರ ಎಚ್.ಜಿ.
  • ಇಲ್ಲಿಂದ ಮುಂದೆ ಒಂದು ವಾರ ಮಹಾವೀರ ಮೆಡಿಕಲ್ ಸೆಂಟರ್‌ನ ೧೧೦ ಸಂಖ್ಯೆಯ ಕೊಠಡಿ ನನ್ನ ಮನೆ! ಬೆಡ್ ಮೇಲೆ ಕಣ್ಣು ಮುಚ್ಚಿ ಮಲಗಿದವನು ಆದ ಘಟನೆಗಳನ್ನು ಮತ್ತೊಮ್ಮೆ ಜೋಡಿಸ ತೊಡಗಿದೆ. ಆಗ ಒಂದು ಸಂಗತಿ ನೆನಪಾತು ! ಸಾಮಾನ್ಯವಾಗಿ ಮುಂಜಾನೆ ವಾಕಿಂಗ್ ಹೋಗಿ ಬಂದವನು ಸ್ನಾನ ಮಾಡಿ ಚಿಕ್ಕದಾಗಿ ಪೂಜೆ ಮಾಡುವುದು ನನ್ನ ಪದ್ಧತಿ. ೨೬ರ ಮುಂಜಾನೆ ಎಂದಿನಂತೆ ಪೂಜೆಗೆ ಕುಳಿತಿದ್ದೆ. ನಾನು ಪೂಜೆ ಮಾಡುವಾಗ ದೀಪ ಹಚ್ಚುವುದು ನನ್ನ ಪತ್ನಿಯ ಕ್ರಮ. ಅಂದು ಆಕೆ ದೀಪ ಬೆಳಗುತ್ತಿದ್ದಂತೆ ನಂದಿಹೋತು! 'ಎಂದೂ ಹೀಗಾಗಿರಲಿಲ್ಲ ಇದೇನಪ್ಪಾ' ಎಂದು ಮತ್ತೆ...
    Read more...

    Subscribe