Saturday, January 30, 2010
2
Saturday, January 30, 2010
ಡಾ.ಶ್ರೀಧರ ಎಚ್.ಜಿ.
ಜೋಗಿಗೆ ಸನ್ಮಾನದ ಹಿರಿಮೆ !
ಉಪ್ಪಿನಂಗಡಿಯ ಗಿರೀಶ್ ರಾವ್‌ಗೆ ಸನ್ಮಾನ ! ಹೀಗೆಂದರೆ ಹಲವರಿಗೆ ಪರಿಚಯವಾಗಲಿಕ್ಕಿಲ್ಲ.ಬರಹಗಾರ ಜೋಗಿಗೆ ಸನ್ಮಾನ ಎಂದರೆ ಹಲವರಿಗೆ ಪರಿಚಯಸಿಗಬಹುದು.ಸುಮಾರು ನಾಲ್ಕು ವರ್ಷಗಳ ಹಿಂದೆ, ಗಿರೀಶ್ ರಾವ್ ಅವರನ್ನು ಕನ್ನಡ ಪ್ರಭದ ಕಛೇರಿಯಲ್ಲಿ ಭೇಟಿಯಾಗಿದ್ದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿದ್ದ ನನ್ನ ವಿದ್ಯಾರ್ಥಿನಿ ವಿದ್ಯಾರಶ್ಮಿ ಜೋಗಿಯವನ್ನು ಭೇಟಿ ಮಾಡಿಸಿದ್ದರು. ಅವರು ಪುತ್ತೂರಿನವರು ಎಂಬ ಕಾರಣಕ್ಕೆ ನನಗೆ ಆ ಭೇಟಿ ಸಂತೋಷವನ್ನು ನೀಡಿತ್ತು. ಮೊದಲ ಭೇಟಿಯಾದ್ದರಿಂದ ನನಗೆ ಆಗ ಮುಕ್ತವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಅನಂತರ ಎರಡು...
Read more...
Tuesday, January 12, 2010
1
Tuesday, January 12, 2010
ಡಾ.ಶ್ರೀಧರ ಎಚ್.ಜಿ.
ತಿಂಗಳ ತರಂಗ ೪. - ಚರಿತ್ರೆ ಕಟ್ಟುವ ಬಗೆ
ಇಂದು ಚರಿತ್ರೆಯನ್ನು ಹೊಸ ದ್ಟೃಂದ ನೋಡುವ ಅಗತ್ಯವಿದೆ. ಹಾಗೆಯೇ ಚರಿತ್ರೆ ಕಟ್ಟುವ ವಿಧಾನವನ್ನು ಮರುಚಿಂತನೆಗೆ ಗುರಿಪಡಿಸುವ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ನೆಲೆಂದ ರಚನೆಗೊಂಡ ಚರಿತ್ರೆಯನ್ನು ತಲುಪಿಸುವ ಅಗತ್ಯವಿದೆ ಎಂದು ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎನ್. ವೆಂಕಟೇಶ್ ಹೇಳಿದರು. ಅವರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಯಾವುದು ಚರಿತ್ರೆ ? ಚರಿತ್ರೆ ಕಟ್ಟುವ ಬಗೆ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು. ಇಂದು ನಾವು ಓದುತ್ತಿರುವ ಚರಿತ್ರೆಯನ್ನು...
Read more...
0
ಡಾ.ಶ್ರೀಧರ ಎಚ್.ಜಿ.
ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ಆರಂಭ :
ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿಯವರದು ಅತ್ಯುತ್ತಮ ಚಿಂತಕರಲ್ಲಿ ಒಬ್ಬರು. ಭಗವದ್ಗೀತೆ, ಮಹಾಭಾರತ, ರಾಮಾಯಣ, ಭಾಗವತ, ವೇದ, ಉಪನಿಷತ್ತು, ಸೌಂದರ್ಯಲಹರಿ, ಯೋಗವಾಸಿಷ್ಠ - ಹೀಗೆ ಹಲವು ವಿಷಯದ ಮೇಲೆ ನಿರಂತರವಾಗಿ ಉಪನ್ಯಾಸಗಳನ್ನು ನೀಡುತ್ತಾ ಬಂದ ಹಿರಿಮೆ ಇವರದು. ಇದಕ್ಕೆಲ್ಲ ವೇದಿಕೆಯನ್ನು ಕಲ್ಪಿಸಿದ್ದು ಪುತ್ತೂರಿನ ಪುರಂದರಭಟ್ಟರ ಅನುರಾಗ. ಇದೀಗ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ದಿನಾಂಕ ೦೯.೦೧.೨೦೧೦ರಿಂದ ಆರಂಭವಾಗಿದೆ.ಮಂಕುತಿಮ್ಮನ ಕಗ್ಗ ಕನ್ನಡ ಸಂಸ್ಕೃತಿಯ ಒಂದು ಅಶ್ವತ್ಥವೃಕ್ಷ. ಡಿ.ವಿ.ಜಿ.ಯವರ ಕೃತಿಯಲ್ಲಿ...
Read more...
0
ಡಾ.ಶ್ರೀಧರ ಎಚ್.ಜಿ.
ವಿಜೃಂಭಣೆಯ ವಿವೇಕಾನಂದ ಜಯಂತಿ 2010
ಪುತ್ತೂರು: ಸ್ವಾಮಿ ವಿವೇಕಾನಂದರು ತಾರುಣ್ಯಕ್ಕೊಂದು ಜೀವಂತ ಹಾಗೂ ಸಾರ್ವಕಾಲಿಕ ಆದರ್ಶ. ಯುವಜನರಿಗೆ ಆತ್ಮದರ್ಶನ ಮಾಡಿಸಿ ಸಾವಿನೆಡೆಗೆ ಮುಖ ಮಾಡಿನಿಂತ ದೇಶಕ್ಕೆ ಜೀವ ತುಂಬಿ ಹೊಸ ಪಥವನ್ನು ತೋರಿದ, ದೇಶವನ್ನೇ ಬದಲಾಸಿದ ಮಹಾನ್ ಧೀಮಂತ. ಅವರ ವ್ಯಕ್ತಿತ್ವ ಇಡೀ ಜಗತ್ತಿಗೇ ಸ್ವೀಕೃತವಾಗಿತ್ತು ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ಸು.ರಾಮಣ್ಣ ಹೇಳಿದರು.ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾಲೇಜಿನ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ...
Read more...
Monday, January 4, 2010
6
Monday, January 4, 2010
ಡಾ.ಶ್ರೀಧರ ಎಚ್.ಜಿ.
ಶ್ರೀಧರ ಸ್ವಾಮೀಜಿಗೆ ನಮನ !
ಸ್ವಾಮೀಜಿಗಳ ಬಗೆಗೆ ವಿವಾದಗಳು ಆರಂಭವಾದಾಗಲೆಲ್ಲ ನನಗೆ ನೆನಪಾಗುವುದು ಶ್ರೀಧರ ಸ್ವಾಮಿಗಳು. ಮಹಾರಾಷ್ಟ್ರದ ಸಜ್ಜನಗಡದಿಂದ ಸಾಗರಕ್ಕೆ ಸಮೀಪದ ವರದಹಳ್ಳಿಗೆ ಆಗಮಿಸಿ ಅಲ್ಲೊಂದು ಆಶ್ರಮವನ್ನು ಸ್ಥಾಪಿಸಿ ಸದಾ ಸಮಾಜಮುಖಿಯಾಗಿ ಬದುಕಿದ ಅವರದು ಸದಾ ತಪೋಮುಖಿಯಾದ ಬದುಕು. ಬದುಕಿನಲ್ಲಿ ಯಾವುದೇ ವಿವಾದಗಳನ್ನು ಅಂಟಿಸಿಕೊಳ್ಳದೆ ಪರಿಶುದ್ಧ ಬದುಕನ್ನು ಬಾಳಿದವರು. ತಮ್ಮ ಸುತ್ತಲಿನ ಎಲ್ಲ ವರ್ಗದ ಜನ ಮತ್ತು ಸಮಾಜವನ್ನು ನಿಷ್ಕಲ್ಮಷವಾಗಿ ಪ್ರೀತಿಸಿದವರು. ಅಂತಹ ಸ್ವಮೀಜಿಯನ್ನು ಮತ್ತೆ ನೋಡಲು ಸಾಧ್ಯವೇ ಎಂಬ ಆತಂಕ ಸದಾ ಕಾಡುತ್ತದೆ. ...
Read more...
0
ಡಾ.ಶ್ರೀಧರ ಎಚ್.ಜಿ.
ಹೇಮಂತ ಹಬ್ಬ
ಡಾ. ತಾಳ್ತಜೆ ವಸಂತಕುಮಾರ ಇವರ ಪತ್ನಿ ಮಣಿಮಾಲಿನಿ ಇವರ ಹೆಸರಿನಲ್ಲಿ ಆರಂಭವಾಗಿರುವ ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನದ ಆಶ್ರಯದಲ್ಲಿ ೨೭.೧೨.೧೦೦೯ರಂದು ಹೇಮಂತ ಹಬ್ಬ ಕಾರ್ಯಕ್ರಮ ನಡೆಯಿತು. ತಾಳ್ತಜೆಯವರ ನೆಂಟರು, ಬಂಧುಗಳು, ಸ್ನೇಹಿತರು ಆಗಮಿಸಿದ್ದರಿಂದ ಒಂದು ಕೌಟುಂಬಿಕ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಚಿನ್ನಪ್ಪಗೌಡ ಮಾತನಾಡುತ್ತ, ಕನಸುಗಳಿಲ್ಲದ ಸಮಾಜದಲ್ಲಿ ಬದುಕುವುದು ಕಷ್ಟ. ಪ್ರೀತಿ, ಸಂಬಂಧಗಳ ಬೆಸುಗೆರುವ ಬದುಕನ್ನು ಇಂದು ಕಟ್ಟಬೇಕಾದ...
Read more...
0
ಡಾ.ಶ್ರೀಧರ ಎಚ್.ಜಿ.
ತಿಂಗಳ ತರಂಗ - ೦೩
೨೦೧೨ ಡಿಸೆಂಬರ್ ೨೧ಕ್ಕೆ ಪ್ರಳಯ ! ಎಂಬ ಸುದ್ದಿ ಮಾಧ್ಯಮಗಳಲ್ಲಿ, ಜನರಬಾಯಲ್ಲಿ ಹರಿದಾಡುತ್ತಿರುವಾಗಲೇ ಜ್ಯೋತಿಷ್ಯದ ಬಗೆಗೊಂದು ಉಪನ್ಯಾಸ ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ೨೦.೧೨.೨೦೦೯ರಂದು ನಡೆಯಿತು. ಮನುಷ್ಯನನ್ನು ತಿದ್ದಿ, ತೀಡಿ ಪ್ರೀತಿಯನ್ನು ಬೆಳೆಸಬೇಕಾದ ಜ್ಯೋತಿಷ್ಯ ಇಂದು ಆತನನ್ನು ಅಧ:ಪತನದ ಕಡೆಗೆ ತಳ್ಳುತ್ತಿದೆ. ವಾಸ್ತವದ ನೆಲೆಯಲ್ಲಿ ನೋಡುವುದಕ್ಕೆ ಬದಲಾಗಿ ಈ ಶಾಸ್ತ್ರ ಇಂದು ಪರಿಹಾರೋದ್ಯಮವಾಗಿ ರೂಪುಗೊಂಡಿದೆ. ಜ್ಯೋತಿಷ್ಯ ಎಂದರೆ ಕಾಲವಿಜ್ಞಾನ. ಸೂರ್ಯಮಂಡಲದಲ್ಲಿ ಆಗುವ ಚಲನೆಗಳು ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ....
Read more...
Subscribe to:
Posts (Atom)