Wednesday, March 23, 2011
0
Wednesday, March 23, 2011
ಡಾ.ಶ್ರೀಧರ ಎಚ್.ಜಿ.
ಶಬ್ದಲೋಕ - ಬಾದಾಳ :
ಇದು ಪಾತಾಳಕ್ಕಿಂತ ಬೇರೆಯಾದುದು ಎಂದು ಮೊದಲೇ ಹೇಳಿಬಿಡುತ್ತೇನೆ ! ಇತ್ತೀಚೆಗೆ ನನ್ನ ಪತ್ನಿ ಸವಿತ ಮಾತಿನ ನಡುವೆ ಬಾದಾಳ ಎಂಬ ಶಬ್ದವನ್ನು ಬಳಸಿದಳು. ತಕ್ಷಣ ನನ್ನ ಕಿವಿ ಚುರುಕಾಯಿತು. ನನಗೆ ತಿಳಿದ ಶಬ್ದ ಭಂಡಾರವನ್ನೆಲ್ಲ ಶೋಧಿಸಿ ನೋಡಿದೆ. ಬಾದಾಳ ಸಿಕ್ಕಲಿಲ್ಲ. ನನ್ನಲ್ಲಿರುವ ನಿಘಂಟುಗಳನ್ನು ಶೋಧಿಸಿದರೂ ಬಾದಾಳ ಕಾಣಲಿಲ್ಲ. ಕೊನೆಗೆ ಆಕೆಯನ್ನೇ ನೇರವಾಗಿ ಕೇಳಿದೆ. ಬಾದಾಳ ಎಂದರೆ ಏನು ? "ಮನೆಯಲ್ಲಿ ಸಾಮಾನ್ಯವಾಗಿ ಇಲ್ಲಿ ಹೆಗ್ಗಣಗಳು ಇರುತ್ತವೆ. ಅವು ಇದ್ದ ಮೇಲೆ ಓಡಾಡುತ್ತವೆ. ತಮ್ಮ ಓಡಾಟ, ವಾಸ ಮತ್ತು ಇತರ ಕೆಲವು ಸಂಗತಿಗಳಿಗೆ...
Read more...
0
ಡಾ.ಶ್ರೀಧರ ಎಚ್.ಜಿ.
ಆದಿಪುರಾಣ - 4
ಪಂಪನ ಎರಡೂ ಕೃತಿಗಳಲ್ಲಿ ಗೆಲುವಿನ ತುದಿಯಲ್ಲಿ ರಾಜ್ಯತ್ಯಾಗದ ಚಿತ್ರವಿದೆ. ಈ ತ್ಯಾಗ ಅಣ್ಣ ತಮ್ಮಂದಿರ ನಡುವೆ ನಡೆಯುವುದು ಗಮನಾರ್ಹ. ವಿಕ್ರಮಾರ್ಜುನ ವಿಜಯದಲ್ಲಿ ಧರ್ಮರಾಯನು ಅರ್ಜುನನಿಗೆ ಪ್ರಾಯದ ಪೆಂಪೆ ಪೆಂಪೆಮಗೆ ಮೀರಿದರಂ ತವೆ ಕೊಂದ ಪೆಂಪು ಕಟ್ಟಾಯದ ಪೆಂಪು (ಪಂಪಭಾ ೧೪.೧೭) ಎಂದು ಅರ್ಜುನನಿಗೆ ಅಧಿಕಾರವನ್ನು ಬಿಟ್ಟುಕೊಡುವನು. ಅದೇ ರೀತಿ ಆದಿಪುರಾಣದಲ್ಲಿ ಬಾಹುಬಲಿಯು ಗೆಲುವಿನ ಔನ್ನತ್ಯದಲ್ಲಿ ಭರತನಿಗೆ ತನ್ನ ಹಕ್ಕಿನ ಅಧಿಕಾರವನ್ನು ತ್ಯಾಗ ಮಾಡುವುದರ ಹಿಂದೆ ನಿರ್ದಿಷ್ಟ ಉದ್ದೇಶಗಳಿರುವಂತಿದೆ. ಅಧಿಕಾರದಾಹ, ಅಹಂಕಾರ, ಭೋಗದ...
Read more...
Tuesday, March 1, 2011
0
Tuesday, March 1, 2011
ಡಾ.ಶ್ರೀಧರ ಎಚ್.ಜಿ.
ನೆನಪಿನಂಗಳ - ಚೌಡಿಪುರಾಣ
೧೯೬೩ ಜುಲೈ ೧೩ರಂದು ಶನಿವಾರ ಸಂಜೆ ೬.೨೦ರ ಹೊತ್ತಿಗೆ ಅಮ್ಮನ ತವರು ಮನೆ ಕಲ್ಮಕ್ಕಿಯಲ್ಲಿ ನಾನು ಈ ಜಗತ್ತಿಗೆ ಕಣ್ಣು ಬಿಟ್ಟೆ. ನಾನು ಹುಟ್ಟಿದ ಮೂರು ತಿಂಗಳಿಗೆ ಅಮ್ಮ ನನ್ನನ್ನು ಕಟ್ಟಿಕೊಂಡು ಮುಂಡಿಗೆ ಹಳ್ಳಕ್ಕೆ ಬಂದರು. ಗದ್ದೆಯ ಒಂದು ಬದಿಯಲ್ಲಿ ಅಡಿಕೆ ಗಿಡವನ್ನು ನೆಟ್ಟರು. ಮಳೆಗಾಲದಲ್ಲಿ ಭತ್ತ ಬೇಸಿಗೆಯಲ್ಲಿ ತರಕಾರಿ ಬೆಳೆದರು. ಬೆಲ್ಲ ತಯಾರಿಸಲು ಕಬ್ಬು ಬೆಳೆಯುತ್ತಿದ್ದರು. ಮಳೆಗಾಲದಲ್ಲಿ ಹಂದಿ ಬಂದು ಕಬ್ಬನ್ನು ನಾಶಮಾಡದಂತೆ ರಾತ್ರಿಯ ಕಾವಲು ಮಾಡಬೇಕಾಗಿತ್ತು. ಮನೆಕೆಲಸ, ಗದ್ದೆಯ ವ್ಯವಸಾಯದ ಕೆಲಸ ಎಂದು ಬಿಡುವಿಲ್ಲದ ದುಡಿಮೆಯ...
Read more...
0
ಡಾ.ಶ್ರೀಧರ ಎಚ್.ಜಿ.
ಆದಿಪುರಾಣ - 3
ಆದಿಪುರಾಣವನ್ನು ಇಡಿಯಾಗಿ ಗಮನಿಸಿದರೆ ಪೂರ್ಣತೆಯ ಕಡೆಗೆ ಹೊರಟ ಆತ್ಮವೊಂದು ತನಗಂಟಿದ ಕರ್ಮಬಂಧನಗಳನ್ನು ಕಳೆದುಕೊಳ್ಳುತ್ತ ಹೋಗುವ ದೀರ್ಘ ಯಾತ್ರೆ ಇಲ್ಲಿದೆ. ಆದರೆ ಪಂಪನಂತಹ ಕವಿ ಬದುಕಿನ ಬಗೆಗೆ ಏಕಮುಖಿಯಾಗಿ ಚಿಂತಿಸಲಾರ. ಆತನ ತುಡಿತ, ಒಳದನಿ ಬೇರೆಯದೇ ಆಗಿದೆ. ಭೋಗಜೀವನ, ಯುದ್ಧವನ್ನು ಪಂಪ ವೈಭವೀಕರಿಸಿದ್ದರೂ ಕೃತಿ ಅಂತಿಮವಾಗಿ ವಿಷಾಧ ಭಾವದ ಕಡೆಗೆ ಹೊರಳಿಬಿಡುತ್ತದೆ. ಧರ್ಮದಲ್ಲಿ ನೆಲೆಯಾಗುತ್ತದೆ. ಇಲ್ಲಿನ ಪಾತ್ರಗಳು ಅಂತಿಮವಾಗಿ ಮಾನವ ಧರ್ಮದ ಕಡೆಗೆ ಚಲಿಸುತ್ತವೆ. ಆದ್ದರಿಂದ ಆದಿಪುರಾಣದಲ್ಲಿ ಧರ್ಮ ಮತ್ತು ಕಾವ್ಯಧರ್ಮದ ಸಮನ್ವಯದ...
Read more...
Subscribe to:
Posts (Atom)