Friday, December 25, 2009

0

ಕಾಲೇಜಿಗೆ ನ್ಯಾಕ್ ಬರುವ ಸುದ್ದಿ

  • Friday, December 25, 2009
  • ಡಾ.ಶ್ರೀಧರ ಎಚ್.ಜಿ.
  • Share
  • ಈ ವರ್ಷ ಕಾಲೇಜಿಗೆ ನ್ಯಾಕ್ ಬರಲಿದೆ !
    2004ರಲ್ಲಿ ವಿವೇಕಾನಂದ ಕಾಲೇಜು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿ ಬಿ + + ಶ್ರೇಯಾಂಕವನ್ನು ಪಡೆದಿತ್ತು. ಅದಾಗಿ ಐದು ವರ್ಷಗಳು ಕಳೆದಿವೆ. ಇದೀಗ ಮತ್ತೆ ನ್ಯಾಕ್ ನ ಮೌಲ್ಯಮಾಪನಕ್ಕೆ ನಮ್ಮ ಸಂಸ್ಥೆ ಒಳಗಾಗುವ ಕಾಲ ಬಂದಿದೆ. ಕಾಲೇಜಿನಲ್ಲಿ ಈ ಬಗೆಗೆ ತಯಾರಿಗಳು ಆರಂಭವಾಗಿವೆ. 2010ರ ಮಾರ್ಚ ವೇಳೆಗೆ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಇತಿಹಾಸ ವಿಭಾಗದ ಡಾ. ಪೀಟರ್ ವಿಲ್ಸನ್ ಇವರು ಕೋಆರ್ಡಿನೇಟರ್ ಆಗಿ ಕೆಲಸಮಾಡುತ್ತಿದ್ದಾರೆ. ಇದರ ವರದಿ ತಯಾರಿಕೆಯಲ್ಲಿ ಇಂಗ್ಲಿಷ್ ವಿಭಾಗದ ಡಾ. ಎಚ್. ಮಾಧವಭಟ್ ಮತ್ತು ನಾನು ಸಹಕರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವ ಅಗತ್ಯವಾಗಿ ಇರಬೇಕಾಗುತ್ತದೆ. ದಯವಿಟ್ಟು ಸಂಪರ್ಕಿಸಿ.

    0 Responses to “ಕಾಲೇಜಿಗೆ ನ್ಯಾಕ್ ಬರುವ ಸುದ್ದಿ”

    Subscribe