Saturday, December 26, 2009

1

ಶಬ್ದವಿಹಾರ :

 • Saturday, December 26, 2009
 • ಡಾ.ಶ್ರೀಧರ ಎಚ್.ಜಿ.
 • Share
 • ಕಾಲ್ದಳೆ : ಸಾಗರದ ಹವ್ಯಕ ಭಾಷೆಯಲ್ಲಿ ಮರಹತ್ತುವಾಗ ಆಧಾರಕ್ಕೆ ಕಾಲಿಗೆ ಸಿಕ್ಕಿಸಿಕೊಳ್ಳುವ ವೃತ್ತಾಕಾರದ ಹಗ್ಗದ ಸಾಧನವನ್ನು ಕಾಲ್ದಳೆ ಎಂದು ಕರೆಯುತ್ತಾರೆ. ೨೬.೧೨.2009ರ ವಿಜಯಕರ್ನಾಟಕದ ಪದೋನ್ನತಿ ವಿಭಾಗದಲ್ಲಿ ಇದಕ್ಕೆ 'ಗುದಿ' ಎಂಬ ಪದವನ್ನು ಬಳಸಿದೆ. ಬಾಳೆಯನಾರು, ಕತ್ತದಹಗ್ಗ, ಸೆಣಬಿನ ಹಗ್ಗ ಅಥವಾ ಸ್ಥಳೀಯವಾಗಿ ಸಿಗುವ ಯಾವುದೇ ಬಳ್ಳಿಯಿಂದ ಮರಹತ್ತುವವರು ಇದನ್ನು ತಯಾರಿಸಿಕೊಳ್ಳುತ್ತಾರೆ. "ಕಾಲ್ದಳೆ ಇಲ್ದೆ ಮರಹತ್ಲಾಗ" ಎಂಬ ವಾಕ್ಯ ಹವ್ಯಕದಲ್ಲಿ ಬಳಕೆಯಲ್ಲಿದೆ. ಹಳಗನ್ನಡಲ್ಲಿ "ಬಾಳೆಯ ಗುದಿ ಬಲಗಯ್ಯೊಳ್ ಬಾಳೆಯಗೊನೆ ಪೆಗಲೊಳೊಪ್ಪೆ ವನಚರಂ ನಡೆತಂದಂ ಎಂಬ ಪ್ರಯೋಗ ಸೂಕ್ತಿಸುಧಾರ್ಣವದಲ್ಲಿದೆ.

  1 Responses to “ಶಬ್ದವಿಹಾರ :”

  shashank said...
  January 21, 2010 at 7:21 PM

  in some whare of kasargod we use the word talle for this


  Subscribe