Sunday, July 11, 2010
1
Sunday, July 11, 2010
ಡಾ.ಶ್ರೀಧರ ಎಚ್.ಜಿ.
ವಾಹನದಿಂದ ಬಿದ್ದ ನೆನಪು. . . . .
ಕಾಲೇಜಿನಲ್ಲಿ ಮಾಡಬೇಕಾದ ನ್ಯಾಕ್ ತಯಾರಿಯ ಕೆಲಸ ಸಾಕಷ್ಟಿದೆ ಎಂದು ಏಪ್ರಿಲ್ ೨೫ರಂದು ಮಂಗಳವಾರ ಪುತ್ತೂರಿಗೆ ಹಿಂದಿರುಗಿದೆವು. ಬರುವಾಗಲೇ ಸಂಜೆಯಾದದ್ದರಿಂದ ಎಲ್ಲಿಗೂ ಹೊರಗೆ ಹೋಗಲಿಲ್ಲ. ಮರುದಿನ ೨೬ ರಂದು ಮುಂಜಾನೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿಯಾಗಿ ೨೭ ರಿಂದ ನ್ಯಾಕ್ ತಯಾರಿಯ ಕೆಲಸವನ್ನು ಆರಂಭಿಸುವುದಾಗಿಯೂ, ಕಛೇಯಿಂದ ಒಬ್ಬರನ್ನು ಸಹಾಯಕ್ಕೆ ಕೊಡಬೇಕೆಂದು ವಿನಂತಿ ಮಾಡಿದೆ. ಅದಕ್ಕವರು ಬಿಡುವಿನ ಸಮಯದಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದೆಂದು ಸೂಚಿಸಿದರು. ಅದೇ ರೀತಿ ನ್ಯಾಕ್ ವರದಿಯನ್ನು ತಯಾರಿಸುವಲ್ಲಿ ಸಹಾಯ ಮಾಡಿದ ಮುರಳಿಯಲ್ಲಿ ಮಧ್ಯಾಹ್ನದ ನಂತರ ನ್ಯಾಕ್ ಫೈಲುಗಳ ಪರಿಶೀಲನೆಗೆ ಬರುವುದಾಗಿ ತಿಳಿಸಿ ಕಾಲೇಜಿನಿಂದ ಹೊರಡುವಾಗ ಇಂದು ಡಾ. ದುರ್ಗಾಪ್ರವೀಣನ ಮದುವೆ ಎಂದು ಸ್ನೇಹಿತರು ನೆನಪಿಸಿದರು.
ಡಾ. ದುರ್ಗಾಪ್ರವೀಣ ನಮ್ಮ ಕಾಲೇಜಿನಲ್ಲಿ ಕನ್ನಡ ಐಚ್ಚಿಕ ಬಿ.ಎ. ಓದಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಿಎಚ್.ಡಿಯನ್ನು ಮುಗಿಸಿ ಇದೀಗ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ತುಳು ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಊರಿಗೆ ಬಂದಾಗಲೆಲ್ಲ ನನ್ನ ಮನೆಗೆ ಬಂದು ಹೋಗುವುದು ಆತನ ಕ್ರಮ. ಈಗ ವಿದ್ಯಾರ್ಥಿ ಎನ್ನುವುದಕ್ಕಿಂತ ಸಮಾನ ಮನಸ್ಕನಾಗಿ ಯೋಚಿಸಬಲ್ಲ; ಕೆಲವೊಮ್ಮೆ ನಮ್ಮನ್ನು ಮೀರಿ ಮುನ್ನಡೆಯಬಲ್ಲ. ವಿದ್ಯಾರ್ಥಿಗಳು ಈ ಹಂತವನ್ನು ತಲುಪಿದರೆ ನಮಗದು ಅತ್ಯಂತ ಹೆಮ್ಮೆಯ ವಿಷಯ. ಆತನ ನಿಶ್ಚಿತಾರ್ಥಕ್ಕೂ ನಾನು ಪತ್ನಿಯೊಂದಿಗೆ ಹೋಗಿದ್ದೆ. ಹೀಗಾಗಿ ಮದುವೆಗೆ ಹೋಗದಿದ್ದರೆ ಹೇಗೆ ? ಹೀಗಾಗಿ ಮಧ್ಯಾಹ್ನ ಹನ್ನೆರಡೂವರೆಗೆ ಮನೆಂದ ಹೊರಟೆ. ಹೊರಡುವ ಕಾಲಕ್ಕೆ ಒಮ್ಮೆ ಸಂಜೆ ಹೋದರಾಗಬಹುದಲ್ಲ ಎಂಬ ಆಲೋಚನೆ ಬಂತು. ಸಂಜೆ ಮಳೆ ಬಂದರೆ ಕಷ್ಟ ಎಂದು ಈಗಲೇ ಹೊರಡಲು ನಿರ್ಧರಿಸಿದೆ. ಮಗನಲ್ಲಿ ಹೆಲ್ಮೆಟ್ ಕೊಡಲು ಹೇಳಿ ಹಾಕಿಕೊಂಡು ಹೊರಟೆ. ಸಾಮಾನ್ಯವಾಗಿ ಕಾಲೇಜಿಗೆ ಹೋಗುವಾಗ ಹೆಲ್ಮೆಟ್ ಹಾಕುವುದಿಲ್ಲ.
ಸಾಮಾನ್ಯವಾಗಿ ೩೦ - ೪೦ ಕಿ.ಮೀ. ವೇಗದಲ್ಲಿ ಹೋಗುವುದು ನನ್ನ ಕ್ರಮ. ಕಬಕ ದಾಟಿ, ಕೂವೆ "ತ್ತಿಲು ದಾಟಿ ತುಸು ಮುಂದೆ ಹೋಗುವಾಗ ಹಿಂದೆ ಯಾರಿದ್ದಾರೆ ಎಂದು ಕನ್ನಡಿಯಲ್ಲಿ ನೋಡಿದೆ. ಒಂದು ಅಂಬುಲೆನ್ಸ್, ಅದರ ಹಿಂದೆ ಒಂದು ಬಿಳಿ ಕಾರು ಮತ್ತು ಒಂದು ಟಾಟಾ ಸುಮೋ ರೀತಿಯ ವಾಹನ ಬರುತ್ತಿತ್ತು. ನಾನು ಅಂಬುಲೆನ್ಸ್ ವಾಹನಕ್ಕೆ ದಾರಿ ಬಿಡಲೆಂದು ವಾಹನವನ್ನು ತುಸು ನಿಧಾನಿಸಿದೆ. ಅಂಬುಲೆನ್ಸ್ ದಾಟಿ ಮುಂದೆ ಹೋತು. ಎದುರಿನಿಂದ ಮಿತ್ತೂರಿನ ರೈಲ್ವೆ ಸೇತುವೆ ಕಾಣುತ್ತಿತ್ತು. ಮಾಣಿ ಕಡೆಂದ ಒಂದು ವಾಹನ ಎದುರಿನಿಂದ ಬರುತ್ತಿತ್ತು. ಈ ಹೊತ್ತಿಗೆ ಹಿಂದಿನ ಬಿಳಿ ಕಾರಿನವನು ನನ್ನನ್ನು ಓವರ್‌ಟೇಕ್ ಮಾಡುವ ಸಲುವಾಗಿ ಒಮ್ಮೆಲೆ ನುಗ್ಗಿ ಬಂದ. ಕಾರು ಸಾಕಷ್ಟು ವೇಗವಾಗಿತ್ತು. ಅಲ್ಲದೆ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸ ಬೇಕಿತ್ತು. ಈ ಅವಸರದಲ್ಲಿ ಕಾರಿನವನು ನನ್ನ ಕಡೆಗೆ ಒಮ್ಮೆಲೆ ಬಂದ. ನಾನು ಆ ಹೊತ್ತಿಗೆ ರಸ್ತೆಯ ಅತ್ಯಂತ ಎಡಭಾಗದಲ್ಲಿದ್ದೆ. ಕಾರಿನವನು ತೀರ ಪಕ್ಕಕ್ಕೆ ಬಂದಾಗ ರಸ್ತೆಂದ ಕೆಳಗೆ ಇಳಿಸುವುದೇ ಕ್ಷೇಮ ಎನಿಸಿತು. ಆ ಹೊತ್ತಿಗೆ ಆತ ಪಕ್ಕದಲ್ಲಿ ಸುಮಾರು ಒಂದೆರಡು ಇಂಚು ಅಂತರದಲ್ಲಿ ಚಲಿಸಲಾರಂಭಿಸಿದ. ತುಸು ವ್ಯತ್ಯಾಸವಾಗಿ ನನಗೆ ತಾಗಿದರೆ ನಾನು ಎಲ್ಲಿಯೋ ಹೋಗಿ ಬೀಳುತ್ತಿದ್ದೆ. ಆದ್ದರಿಂದ ಹಿಂದೆ ಮುಂದೆ ನೋಡದೆ ನನ್ನ ವಾಹನವನ್ನು ರಸ್ತೆಯಿಂದ ಕೆಳಗೆ ಇಳಿಸಿದೆ. ಆ ಸ್ಥಳದಲ್ಲಿ ರಸ್ತೆ ಮತ್ತು ನೆಲದ ನಡುವೆ ಸುಮಾರು ಮುಕ್ಕಾಲು ಅಥವಾ ಒಂದು ಅಡಿ ಅಂತರವಿತ್ತು.(ಚಡಿ) ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ನಾನು ಬಿದ್ದಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಜೋಪಾನವಾಗಿ ನನ್ನ ವಾಹನ ನಡೆಸಿ ಹೊಸದೆಂಬತ್ತಿತ್ತು. ಮೊದಲ ಸಲ ವಾಹನ ನನ್ನ ಆಯತಪ್ಪಿ ನೆಲಕ್ಕೆ ಒರಗಿತ್ತು. ನಾನು ನೆಲಕ್ಕೆ ಬಿದ್ದವನು ರಸ್ತೆಯ ಅಂಚಿನಲ್ಲಿ ಟಾರು ರಸ್ತೆಗೆ ಕೊನೆಕ್ಷಣದಲ್ಲಿ ತುಸು ಜಾರಿ ಹೋಗಿ ಬಿದ್ದೆ. ಬಿದ್ದ ತಕ್ಷಣ ತಲೆ ಎತ್ತಿ ನೋಡಿದರೆ, ನಾನು ಬೀಳಲು ಕಾರಣವಾದ ಕಾರು ಶರವೇಗದಲ್ಲಿ ಮುಂದೆ ಹೋಗುತ್ತಿತ್ತು. ಆ ಕಾರಿನಲ್ಲಿದ್ದವರು ಮನುಷ್ಯತ್ವವಿಲ್ಲದವರಂತೆ ಹೋಗಿಬಿಟ್ಟರು. ಇಂತವರೆಲ್ಲ ಒಂದು ದಿನ ನೋವನ್ನು ಅನುಭವಿಸುತ್ತಾರೆ ಎಂಬ ಭರವಸೆ ನನಗಿದೆ. ಭಗವಂತ ಅವರನ್ನು ಅಷ್ಟು ಸುಲಭವಾಗಿ ಕ್ಷಮಿಸಲಾರ!
ನನ್ನ ಹಿಂದೆ ಬರುತ್ತಿದ್ದ ಟಾಟಾ ಸುಮೋ ವಾಹನದ ವ್ಯಕ್ತಿ ತಕ್ಷಣ ನಿಲ್ಲಿಸಿ ಕೇಳಿದ ಮೊದಲ ಮಾತು "ಕಾರಿನವನು ನಿಮಗೆ ತಾಗಿಸಿ ಹೋದನೆ ?" ಎಂದು. ಕಾರಿನವನು ಹೋಗುವ ಅವತಾರವನ್ನು ನೋಡಿ ಅವರು ನನಗೆ ತಾಗಿಸಿ ಹೋದನೆಂದೇ ಎಣಿಸಿದ್ದರಂತೆ. ಎದುರಿನಿಂದ ಬರುತ್ತಿದ್ದ ವಾಹನದವರು ನಿಲ್ಲಿಸಿ ನನ್ನ ಯೋಗಕ್ಷೇಮವನ್ನು ವಿಚಾರಿಸಿದರು. ನಾನು ಬೀಳುವಾಗ ನನ್ನ ಅಂಗಿಯ ಜೇಬಿನಲ್ಲಿದ್ದ ಕನ್ನಡಕ ರಸ್ತೆಗೆ ಬಿದ್ದಿತ್ತು. ಅದನ್ನು ಅವರೇ ಹೆಕ್ಕಿ ಕೊಟ್ಟರು. ಆ ಹೊತ್ತಿಗೆ ನಾನು ಎದ್ದು ನಿಂತಿದ್ದೆ. ಬಲಕಾಲು ಮತ್ತು ಬಲಕೈಗೆ ತರಚಿದ ಗಾಯವಾಗಿತ್ತು. ಹಾಕಿದ ಪ್ಯಾಂಟ್ ಹರಿದಿತ್ತು. ನಾನು ಹೆಲ್ಮೆಟ್ ತೆಗೆದು ತುಸು ಉಸಿರೆಳೆದುಕೊಂಡೆ. ನನ್ನ ತಲೆಗೆ ಏನಾದರೂ ಪೆಟ್ಟಗಿದೆಯೇ ಎಂದು ಹಿಂದಿನ ವಾಹನದವರು ಪರಿಶೀಲಿಸಿದರು. ನಾನು ಏನೂ ತೊಂದರೆಲ್ಲ, ಸರಿಯಾಗಿದೇನೆ ಎಂದ ನಂತರ ಅವರು ತೆರಳಿದರು. ಈ ಹೊತತಿಗೆ ಅಲ್ಲಿಯೇ ರಸ್ತೆಯ ಪಕ್ಕದಲ್ಲಿದ್ದ ಮಸೀದಿಂದ ಒಬ್ಬ ವ್ಯಕ್ತಿ ಓಡಿ ಬಂದು ನೆಲದಲ್ಲಿ ಮಲಗಿದ್ದ ನನ್ನ ವಾಹನವನ್ನು ಎತ್ತಿ ನಿಲ್ಲಿಸಿದರು. 'ವಾಹನ ಹೊಸದಾ' ಎಂದು ಕೇಳಿದರು. ನಾನು ನಾಲ್ಕು ವರ್ಷವಾಯಿತು ಎಂದೆ. ಅವರು 'ಹೌದಾ' ಎಂದು ಆಶ್ಚರ್ಯ ವ್ಯಕ್ತಪಡಿಸಿದರು. 'ನೀರು ಕುಡಿಯುತ್ತೀರಾ' ಎಂದು ವಿಚಾರಿಸಿದರು. ನಾನು ಅಗತ್ಯವಿಲ್ಲವೆಂದು ಹಿಂದಿರುಗಿ ಹೊರಡಲು ಸಿದ್ದನಾದೆ. ಆಗ ಮಸೀದಿಂದ ಬಂದ ವ್ಯಕ್ತಿ ಸ್ವಲ್ಪ ನೀರು ಕುಡಿರಿ, ಮುಖ ತೊಳೆದುಕೊಳ್ಳಿ ಎಂದು ಹಿತವಚನ ನೀಡಿದರು. ಅದರಂತೆ ನೀರು ಕುಡಿದು, ಮುಖತೊಳೆದು ನನ್ನ ವಾಹನದಲ್ಲಿ ಹಿಂದಿರುಗಿ ಹೊರಟೆ.
ನೇರವಾಗಿ ಮುರದಲ್ಲಿರುವ ಡಾ. ಆಳ್ವರಲ್ಲಿಗೆ ಬಂದೆ. ರಸ್ತೆಯ ಎಡಭಾಗದಲ್ಲಿ ವಾಹನ ನಿಲ್ಲಿಸಿ ರಸ್ತೆಯನ್ನು ದಾಟುವಾಗ ಮೊಳಕಾಲಿನ ಚಿಪ್ಪಿನ ಹಿಂದೆ ಹಿಡಿದುಕೊಳ್ಳುತ್ತಿರುವ ಅನುಭವ ಆಯಿತು. ಹಾಗೆಯೇ ಮೊಳಕಾಲು ಚಿಪ್ಪು ತುಸು ದಪ್ಪವಾಗಿತ್ತು. ಆಳ್ವರಲ್ಲಿ ಒಳಗೆ ರೋಗಿಗಳಿದ್ದರು. ನಾನು ತುಸು ಕಾದು ಒಳಗೆ ಹೋದಾಗ ಅವರಿಗೆ ನನ್ನ ಗುರುತು ಸಿಕ್ಕಿತು. ಏನಾತೆಂದು ಅವರಿಗೂ ಗಾಬರಿ. ನನ್ನನ್ನು ಪರಿಶೀಲಿಸಿ ನನ್ನ ತರಚಿದ ಗಾಯಕ್ಕೆ ಪ್ರಥಮ ಚಿಕಿತ್ಸೆಯನ್ನು ಮಾಡಿದ ನಂತರ ಕಾಲನ್ನು ಡಾ. ಪ್ರದೀಪ ಅವರಲ್ಲಿ ತೋರಿಸುವುದು ಒಳ್ಳೆಯದೆಂದು ಸಲಹೆ ನೀಡಿದರು. ಅವರೇ ಡಾಕ್ಟರನ್ನು ಸಂಪರ್ಕಿಸಿ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ಹೊತ್ತಿಗೆ ನಾನು ಅವರ ಟೇಬಲ್ ಎದುರಿಗೆ ಬಂದು ಕುಳಿತಿದ್ದೆ. ಆ ಕಡೆಯಿಂದ ಆಳ್ವರು ಮಾತನಾಡುತ್ತಿರುವುದು ಕೇಳುತ್ತಿತ್ತು. ಅದೇ ಹೊತ್ತಿಗೆ ನಾನು ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳತೊಡಗಿದೆ. ಕುರ್ಚಿಯಲ್ಲಿ ಕುಳಿತವನಿಗೆ ಸುತ್ತಲಿನ ಜಗತ್ತು ಒಮ್ಮೆಲೆ ತಿರುಗತೊಡಗಿತು. ನಾನು ಕುಯಿಂದ ಬೀಳುವ ಹಾಗೆ ಆದದ್ದು ನೆನಪಿದೆ. ಮತ್ತೆಲ್ಲವೂ ಕತ್ತಲೆ.
ನನಗೆ ಎಚ್ಚರವಾದಾಗ ಆಳ್ವರು ಯಾರದೋ ಸಹಾಯದಿಂದ ನನ್ನನ್ನು ಎತ್ತಿಕೊಂಡು ಬಂದು ಹೊರಗಿನ ಬೆಂಚಿನ ಮೇಲೆ ಮಲಗಿಸುತ್ತಿದ್ದರು. ಕಣ್ಣು ಮುಚ್ಚಿಯೇ ಇರಿ, ನೀರು ಹಾಕುತ್ತೇನೆ ಎಂದು ಹೇಳುತ್ತಿದ್ದರು. ಅವರು ಮುಖದ ಮೇಲೆ ನೀರು ಹಾಕಿದಾಗ ತುಸು ನೆಮ್ಮದಿಯ ಭಾವ ಬಂತು. ನನಗೆ ಏನೋ ಆಗಬಾರದ್ದು ಆಗಿದೆ ಎಂದು ಅನಿಸಿತು. ಆಳ್ವರು ನನಗೆ ಏನೂ ಆಗಿಲ್ಲ, ಹೀಗೆ ಬಿದ್ದಾಗ ಒಮ್ಮೆ ಎಚ್ಚರ ತಪ್ಪುತ್ತದೆ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು. ನನ್ನನ್ನು ಆಸ್ಪತ್ರೆಗೆ ಸಾಗಿಸುವುದರ ಕಡೆಗೆ ಗಮನ ಹರಿಸಿದರು. ಅವರ ಅಳಿಯ ಅರುಣ್ ಪ್ರಕಾಶ್ ನನ್ನ ಜೊತೆಯಲ್ಲಿ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಅವರನ್ನು ಸಂಪರ್ಕಿಸಿ ಬರುವಂತೆ ಹೇಳುತ್ತಿರುವುದು ನನಗೆ ಮಲಗಿದಲ್ಲಿಂದಲೇ ಕೇಳುತ್ತಿತ್ತು. ಒಂದೈದು ನಿಮಿಷದಲ್ಲಿ ಅವರು ಪ್ರತ್ಯಕ್ಷರಾದರು. ಅರುಣ್ ಪ್ರಕಾಶರಿಗೆ ಬೈಕ್‌ನಿಂದ ಬಿದ್ದು ಸಾಕಷ್ಟು ಅನುಭವವಿದೆ. ಅವರೂ ಏನೂ ಆಗುವುದಿಲ್ಲವೆಂದು ಸಮಾಧಾನ ಮಾಡಿದರು. ಈ ಹೊತ್ತಿಗೆ ನನಗೆ ಮಂಪರು ಹೋಗಿ ಎಚ್ಚರವಾಗಿದ್ದೆ. ಸಹಜ ಸ್ಥಿತಿಗೆ ಬಂದಿದ್ದೆ. ಕಾಲು ಮಾತ್ರ ಕಿರಿಕಿರಿ ಮಾಡುತ್ತಿತ್ತು. ಡಾ. ಆಳ್ವರು ಸ್ವತ: ತಮ್ಮ ಕಾರಿನಲ್ಲಿ ನಮ್ಮನ್ನು ಮಹಾವೀರ ಆಸ್ಪತ್ರೆಗೆ ಬಿಟ್ಟರು. ಆಳ್ವರ ಈ ಉಪಕಾರ ಸದಾ ಸ್ಮರಣೀಯ. ಅವರ ಈ ವಿಶ್ವಾಸದ ಋಣ ದೊಡ್ಡದು. ನಾನು ಆಸ್ಪತ್ರೆಯ ಹೊರಗಿನ ಕುರ್ಚಿಯಲ್ಲಿ ಕುಳಿತೆ. ಅರುಣ್ ಪ್ರಕಾಶ್ ವೈದ್ಯರನ್ನು ಹುಡುಕಿಕೊಂಡು ಹೋದರು.
Read more...

Saturday, July 3, 2010
0
Saturday, July 3, 2010
ಡಾ.ಶ್ರೀಧರ ಎಚ್.ಜಿ.
ಸ್ವರ್ಣವಲ್ಲಿಗೆ ನನ್ನ ಮೊದಲ ಭೇಟಿ
ತಮ್ಮನ ಮಗ ಚೇತನ್‌ನ ಉಪನಯನದ ನಿಮಿತ್ತ ಮೇ ೧೩ರಂದು ಊರಿನ ಕಡೆಗೆ ಮುಖಮಾಡಿದೆ. ಮೇ ೧೬ ರಂದು ಕಾರ್ಯಕ್ರಮವು ಚೆನ್ನಾಗಿ ನಡೆತು. ತುಂಬಾ ವರ್ಷಗಳಿಂದ ಭೇಟಿಯಾಗಲು ಸಾಧ್ಯವಾಗದೇ ಇದ್ದ ನೆಂಟರಿಷ್ಟರನ್ನು ನೋಡಲು ಸಾಧ್ಯವಾತು. ಕಾರ್ಯದ ಮನೆ ಎಂದರೆ ಹಾಗೇ. ಅಪರೂಪದ ವ್ಯಕ್ತಿಗಳೆಲ್ಲರೂ ಸಿಗುತ್ತಾರೆ. ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಸಡಗರ, ಸಂಭ್ರಮವನ್ನು ಹೆಚ್ಚಿಸುತ್ತಾರೆ. ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡುವ ಈ ಬಗೆಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು.
ಇದಾಗಿ ಎರಡು ದಿನಕ್ಕೆ ಅಂದರೆ ಮೇ ೧೮ ರಂದು ಶಿರಸಿ ಬಳಿಯ ಸ್ವರ್ಣವಳ್ಳಿ ಮಠಕ್ಕೆ ಭೇಟಿನೀಡುವ ಅಪೂರ್ವ ಅವಕಾಶವೊಂದು ಒದಗಿ ಬಂತು. ಹಲವು ಸಮಯದಿಂದ ನನಗೂ ಈ ಮಠವನ್ನು ನೋಡಬೇಕೆಂಬ ಅಪೇಕ್ಷೆ ಮನಸ್ಸಿನಲ್ಲಿತ್ತು. ಇದಕ್ಕೆ ನೆಪವಾದದ್ದು ಕುಸುಮಚಿಕ್ಕಿಯ ನಿವೇದನೆ ಪುಸ್ತಕ ಬಿಡುಗಡೆ ಸಮಾರಂಭ.
ಮುಂಜಾನೆ ನಮ್ಮ ಮನೆ ಮುಂಡಿಗೆ ಹಳ್ಳದಿಂದ ಹೊರಟು ಮೊದಲು ನಾವೆಲ್ಲ ಶಿರಸಿಗೆ ಹೋದೆವು. ಶಿರಸಿಯಲ್ಲಿ ನಮ್ಮ ಕುಟುಂಬದ ಸ್ನೇಹಿತರೂ, ನನ್ನ ಸಹೋದ್ಯೋಗಿಯೂ ಆಗಿದ್ದ ಪ್ರೊ. ಜಿ.ಟಿ. ಭಟ್ ಮತ್ತು ಜಯಕ್ಕನ ಮನೆಗೆ ನಮ್ಮ ಮೊದಲ ಭೇಟಿ. ಶಿರಸಿವರೆಗೆ ಹೋಗಿ ಜಯಕ್ಕನ ಮನೆಗೆ ಹೋಗದಿದ್ದರೆ ಹೇಗೆ ? ನಾನು ಶಿರಸಿ ಕಾರ್ಯಕ್ರಮದ ಸುದ್ದಿಯನ್ನು ಕೇಳಿ ನನ್ನ ಅಮ್ಮ ಸರೋಜ, ಪತ್ನಿ ಸವಿತ, ಈಕೆಯ ತಂಗಿ ಕವಿತಾ ಜೊತೆಯಲ್ಲಿ ಹೊರಟರು. ಅವರಿಗೆ ಜಯಕ್ಕನ ಮನೆಗೆ ಭೇಟಿ ನೀಡುವುದು ಮುಖ್ಯ ಕಾರ್ಯಕ್ರಮ. ಜಯಕ್ಕನಲ್ಲಿ ಆಸ್ರಿಗೆ ಕುಡಿದು ಅಲ್ಲಿಂದ ಶಿರಸಿಯ ದೇವತೆ ಮಾರಿಯಮ್ಮ ದೇವಾಲಯ ಮತ್ತು ಗಣಪತಿ ದೇವಾಲಯಕ್ಕೆ ಜಯಕ್ಕನ ಮಾರ್ಗದರ್ಶನದಲ್ಲಿ ಭೇಟಿ ನೀಡಿದೆವು. ಜಯಕ್ಕನ ಮನೆಯ ಸ"ಪದಲ್ಲಿರುವ ಪಾದುಕಾಶ್ರಮಕ್ಕೂ ನಾನು, ಅಮ್ಮ ಮತ್ತು ಚಿಕ್ಕಿ ಒಂದು ರೌಂಡ್ ಹೋಗಿಬಂದೆವು. ಪಾದುಕಾಶ್ರಮದ ಪರಿಸರವೇನೋ ಚೆನ್ನಾಗಿತ್ತು. ಆದರೆ ಒಬ್ಬ ವ್ಯಕ್ತಿ ನಮ್ಮ ಹಿಂದೆ ಗೂಢಚಾರನಂತೆ ಹಿಂಬಾಲಿಸಿಕೊಂಡು ಬಂದಿದ್ದು ನನಗೇನೂ ಹಿತವಾಗಲಿಲ್ಲ. ಆಶ್ರಮಕ್ಕೆ ಬಂದವರನ್ನು ಈ ರೀತಿ ಹಿಂಬಾಲಿಸುವುದು ಒಳ್ಳೆಯ ಲಕ್ಷಣವಲ್ಲ. ಬರುವ ಭಕ್ತರು ಅಥವಾ ಪ್ರವಾಸಿಗರೇನು ಭಯೋತ್ಪಾದಕರೇ? ಅಲ್ಲಿದ್ದವರೂ ಸಹ ನಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸಲೂ ಇಲ್ಲ. ಹೀಗಾಗಿ ಆಶ್ರಮದ ಒಳಗಿನ ವಾತಾವರಣ ನನಗೆ ಹಿತವಾಗಲಿಲ್ಲ.
ಜಯಕ್ಕನ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿ ನಾವು ಸ್ವರ್ಣವಲ್ಲೀ ಮಠದ ಕಡೆಗೆ ಹೊರಟೆವು. ಇದಕ್ಕೆ ಪ್ರೊ. ಜಿ.ಟಿ. ಭಟ್ಟರು ನಮ್ಮ ಮಾರ್ಗದರ್ಶಕರು. ಈ ಹೊತ್ತಿಗಾಗಲೇ ಕುಸುಮ ಚಿಕ್ಕಿ ಸಂಭ್ರಮ ಹೇಳತೀರದು. ಈ ಹೊತ್ತಿಗೆ ಸವಿತಂಗೆ ಜ್ವರ ಬಂದಿತ್ತು. ಹೀಗಾಗಿ ಆಕೆ ಮಠಕ್ಕೆ ಬರಲಿಲ್ಲ. ಇನ್ನು ಕವಿತ ಸಹ ಜಯಕ್ಕನ ಮನೆಯಲ್ಲಿಯೇ ಉಳಿದಳು. ಹೀಗಾಗಿ ನಾನು, ಅಮ್ಮ, ಚಿಕ್ಕಿ ಮತ್ತು ಜಿ.ಟಿ. ಭಟ್ಟರು ಮಠದ ಕಡೆಗೆ ಹೊರಟೆವು.
ನಾವು ಸ್ವರ್ಣವಲ್ಲಿಯನ್ನು ತಲುಪಿದಾಗ ಸುಮಾರು ೩.೩೦ರ ಸಮಯ. ಹಸಿರ ಹೊದಿಕೆಯ ನಡುವೆ ಕಂಗೊಳಿಸುವ ಆಶ್ರಮ. ಪ್ರಶಾಂತವಾದ ಪರಿಸರ. ಪೇಟೆಯ ಅವಸರವಿಲ್ಲ. ವಾಹನಗಳ ಗದ್ದಲವಿಲ್ಲ. ಇದರೆಡೆಯಲ್ಲಿ ಶ್ರೀ ಶಂಕರ ಜಯಂತಿಯ ಸಂಭ್ರಮ. ಇಲ್ಲಿ ಹಿರಿಯ ಸಾಹಿತಿ ನಾ.ಸು. ಭರತನಳ್ಳಿಯವರನ್ನು ಭೇಟಿ ಮಾಡಿದ್ದು ದೇವರ ದರ್ಶನವನ್ನು ಮಾಡಿದಷ್ಟೇ ಸಂತಸವನ್ನು ನೀಡಿತು. ಅವರ ಸರಳತೆ, ಸಜ್ಜನಿಕೆ ಮೊದಲ ನೋಟಕ್ಕೆ ನನ್ನನ್ನು ಆರ್ಕಸಿತು. ನಂತರ ಸ್ವಾಮಿಗಳನ್ನು ದರ್ಶನ ಮಾಡಬೇಕೆಂದು ಮಹಡಿಯ ಮೇಲೆ ಹೋದೆವು. ಆದರೆ ನಾವು ಹೋಗುವುದು ತುಸು ತಡವಾದ್ದರಿಂದ ಸ್ವಾಮಿಗಳು ಶಂಕರ ಜಯಂತಿ ಕಾರ್ಯಕ್ರಮಕ್ಕೆ ಬಂದ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳನ್ನು ಸ್ವಾಗತಿಸಲು ಕೆಳಗೆ ಇಳಿದುಬಂದರು. ಅನಂತರ ನಮಗೆ ಅವರನ್ನು ಭೇಟಿಯಾಗಲು ಸಾಧ್ಯವೇ ಆಗಲಿಲ್ಲ.
ಭರತನಳ್ಳಿಯವರ ಪ್ರೀತಿಗೆ ಕಟ್ಟುಬಿದ್ದು ಮಠದಲ್ಲಿ ಚಹವನ್ನು ಸೇವಿಸಿದೆವು. ಅವರ ಪ್ರೀತಿಗೆ ಯಾರನ್ನಾದರೂ ಕಟ್ಟಿಹಾಕುವ ಶಕ್ತಿದೆ. ಶ್ರೀ ಶಂಕರ ಜಯಂತಿ ಕಾರ್ಯಕ್ರಮ ಸುಮಾರು ಅರ್ಧಗಂಟೆ ತಡವಾಗಿ ಆರಂಭವಾತು. ಕಾರ್ಯಕ್ರಮದ ಪ್ರಯುಕ್ತ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ವೈ.ಎಸ್.ವಿ. ದತ್ತ, ಶ್ರೀ ಮಾರ್ಕಂಡೇಯ ಅವಧಾನಿಗಳು, ಮತ್ತೂರು, ಜಿ.ಎಂ. ಹೆಗಡೆ ಹುಳಗೋಳ ಮತ್ತು ಶ್ರೀಮತಿ ಕೀರ್ತಿ ಮಹೇಶ ಹೆಗಡೆ ಬಳ್ಳಾರಿ ಇವರನ್ನು ಮಠದ ವತಿಂದ ಗೌರವಿಸಲಾತು. ಈ ಸಂದರ್ಭದಲ್ಲಿ ಐದಾರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಅನಂತರ ಲೋಕಾರ್ಪಣೆಯಾದ ಕೃತಿಗಳ ಬಗೆಗೆ ೩-೪ ನಿಮಿಷ ಪರಿಚಯದ ಮಾತುಗಳನ್ನಾಡಬೇಕಾಗಿತ್ತು. ಕುಸುಮ ಚಿಕ್ಕಿಯ 'ನಿವೇದನೆ' ಯನ್ನು ಪರಿಚುಸುವ ಅವಕಾಶ ನನಗೆ ಸಿಕ್ಕಿತು. ಹೀಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ಚಿಕ್ಕಿಯ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಯೋಗವೂ ನನ್ನದೇ. ಎಷ್ಟು ಮಂದಿಗೆ ಹೀಗೆ ಚಿಕ್ಕಮ್ಮನ ಪುಸ್ತಕಕ್ಕೆ ಮುನ್ನುಡಿ ಬರೆಯುವ, ಬಿಡುಗಡೆಯ ಸಂದರ್ಭದಲ್ಲಿ ಅದನ್ನು ಪರಿಚುಸುವ ಅವಕಾಶ ಸಿಗುತ್ತದೆ? ಸುಮಾರು ನಾಲ್ಕು ನಿಮಿಷ ಮಾತನಾಡಿದೆ.
" ಹವ್ಯಕ ಸಂಸ್ಕೃತಿ ಇಂದು ಆಹಾರ, ಉಡುಗೆ, ತೊಡುಗೆ, ಶಿಕ್ಷಣ ಹೀಗೆ ಎಲ್ಲಾ ರಂಗಲ್ಲಿಯೂ ತೀವ್ರ ಸ್ವರೂಪದಲ್ಲಿ ಬದಲಾಗುತ್ತಿದೆ. ತಂತ್ರ ಜ್ಞಾನವನ್ನು ಅಪ್ಪಿಕೊಳ್ಳುವ ಭರದಲ್ಲಿ ನಾವು ಮೂಲ ಸಂಸ್ಕೃತಿಂದ ದೂರ ಸರಿಯುತ್ತಿದ್ದೇವೆ. ಧರ್ಮದ ಪ್ರಜ್ಞೆಯ ಅರಿವು ಮೊದಲು ಮನೆಂಯಿದ ಆರಂಭವಾಗಬೇಕು. ಚಿಕ್ಕಮ್ಮನ ಈ ಬಗೆಯ ಅರಿವು ಇಲ್ಲಿ ಹಾಡಾಗಿ ಮೂಡಿಬಂದಿದೆ. ಮಹಿಳೆಯರು ತಮ್ಮ ಅನುಭವಗಳನ್ನು ಬರೆಯುತ್ತಿರುವುದು ಒಳ್ಳೆಯ ಲಕ್ಷಣ. ಆಶ್ಚರ್ಯದ ಸಂಗತಿಯೆದರೆ ೧೮೮೬ರಲ್ಲಿಯೇ ಲಕ್ಷ್ಮೀ ಹೆರೀಗಂಗೆ ಗೋಕರ್ಣ ಎಂಬ ಮಹಿಳೆ 'ಬಾಗಿಲು ತಡೆಯವ ಪದಗಳು' ಎಂಬ ಕೃತಿಯನ್ನು ಪ್ರಕಟಿಸಿದ್ದು ನಮ್ಮ ಗಮನಕ್ಕೆ ಬರುತ್ತದೆ. ಈ ಪರಂಪರೆಯನ್ನು ಕುಸುಮ ಎಸ್. ರಾವ್ ಮುಂದುವರಿಸಿದ್ದಾರೆ" ಎಂಬ ಅಂಶಗಳನ್ನು ಕೇಂದ್ರೀಕರಿಸಿ ಮಾತನಾಡಿದೆ. ನನಗೆ ಆಶ್ಚರ್ಯ ಮೂಡಿಸಿದ ಸಂಗತಿಯೆಂದರೆ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಮಠದ ವತಿಂದ ಫೋಟೋಗಳನ್ನು ತೆಗೆಯುತ್ತಿರಲಿಲ್ಲ. ದಾಖಲೆಗಾಗಿಯಾದರೂ ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು ಅನಿಸಿತು. (ಅಥವಾ ನನಗೆ ಗೊತ್ತಿಲ್ಲದಂತೆ ತೆಗೆದಿದ್ದಾರೋ ಎನೋ!) ನಾವು ಹೊರಟಾಗ ೭.೩೦ರ ಸಮಯ. ಕಾರ್ಯಕ್ರಮ ಇನ್ನೂ ಮುಗಿದಿರಲಿಲ್ಲ. ಸ್ವರ್ಣವಲ್ಲಿಯ ಭೇಟಿಯ ನೆನಪು ಮನದಲ್ಲಿ ಉಳಿತು. ಹಾಗೆಯೇ ಸ್ವಾಮಿಗಳನ್ನು ಭೇಟಿಯಾಗಲು ಸಾಧ್ಯವಾಗದ ಕೊರತೆಯೊಂದು ಮನಸ್ಸಿನಲ್ಲಿ ಉಳಿತು. ಯಾವುದಕ್ಕೂ ಸಮಯ ಬರಬೇಕಲ್ಲ!

Sunday, April 25, 2010
0
Sunday, April 25, 2010
ಡಾ.ಶ್ರೀಧರ ಎಚ್.ಜಿ.
ತಿಂಗಳ ತರಂಗ - ಉಪನ್ಯಾಸ
ವಾಸ್ತವತಾವಾದಿ ಪರಂಪರೆಯ ಮುಖ್ಯ ಸಾಹಿತ್ಯ ಪ್ರಕಾರ ಕಾದಂಬರಿ. ಸ್ವಾತಂತ್ರ್ಯ ಪೂರ್ವದ ಕಾದಂಬರಿಗಳಲ್ಲಿ ಆಧುನಿಕ ಶಿಕ್ಷಣದಿಂದ ಭಾರತೀಯ ಜೀವನ ಕ್ರಮದಲ್ಲಿ ಉಂಟಾದ ತಲ್ಲಣ, ಸೈದ್ಧಾಂತಿಕ ಸಂಘರ್ಷ, ಆದರ್ಶ ಮತ್ತು ಆಧ್ಯಾತ್ಮದ ಬಗೆಗಿನ ಚಿಂತನೆಗಳನ್ನು ನೋಡಲು ಸಾಧ್ಯ. ಸ್ವಾಸ್ಥ್ಯ ಸಮಾಜದ ಆದರ್ಶವನ್ನು ಇಟ್ಟುಕೊಂಡ ಕನಸುಗಾರಿಕೆ ಕನ್ನಡದ ಆರಂಭದ ಕಾದಂಬರಿಗಳಲ್ಲಿದೆ. ಪಾಶ್ಚಾತ್ಯ ಸಂಸ್ಕೃತಿಗೆ ತೆರೆದುಕೊಂಡ ಭಾರತೀಯ ಸಂಸ್ಕೃತಿ ಅನುಕರಣೆ, ಆತ್ಮಸಮರ್ಥನೆ ಮತ್ತು ಸುಧಾರಣೆಯ ಮಾರ್ಗದಲ್ಲಿ ಚಲಿಸಿದ್ದನ್ನು ಕನ್ನಡ ಕಾದಂಬರಿಗಳು ದಾಖಲಿಸಿವೆ ಎಂದು ಪ್ರಾಧ್ಯಾಪಕ ರಮೇಶ್ ಭಟ್ ಎಸ್. ಜಿ. ಹೇಳಿದರು.
ಅವರು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಪೂರ್ವ ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.
ಈ ಕಾಲದ ಕಾದಂಬರಿಗಳಲ್ಲಿ ಸಮಾಜ ಸುಧಾರಣೆಯ ಕಡೆಗಿನ ಚಿಂತನೆ ಮತ್ತು ವಿಶ್ಲೇಷಣೆ ವಿಶೇಷವಾಗಿ ಕಾಣುತ್ತದೆ. ಲೇಖಕರ ಅನುಭವದ ನೆಲೆ ಇಲ್ಲಿ ಮುಖ್ಯವಾಗಿತ್ತು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಮಾತನಾಡುತ್ತ ಪಾಶ್ಚಾತ್ಯ ಶಿಕ್ಷಣವನ್ನು ಪಡೆದ ಪರಿಣಾಮವಾಗಿ ಭಾರತೀಯರಿಗೆ ವ್ಯವಸ್ಥೆಯನ್ನು ಹೊಸದೃಷ್ಟಿಯಿಂದ ನೋಡಲು ಸಾಧ್ಯವಾಯಿತು. ರಾಷ್ಟ್ರೀಯತೆ, ದೇಶೀಯತೆ ,ಆಧುನಿಕ ಶಿಕ್ಷಣದ ಪರಿಣಾಮ, ನಿಸರ್ಗದ ಕಡೆಗಿನ ಒಲವು ಈ ಕಾಲ ಘಟ್ಟದ ಕಾದಂಬರಿಗಳಲ್ಲಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಾಹಿತಿ ಡಾ. ಶ್ರೀನಿವಾಸ ಹಾವನೂರ ಮತ್ತು ರಂಗಭೂಮಿ ಕಲಾವಿದ ಆನಂದ ಗಾಣಿಗ ಇವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು. ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು.

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ- ಬಹುಮಾನ ವಿತರಣೆ
ಪುತ್ತೂರು: ಡಾ.ಕೋಟ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರಂತರ ಕರುಳಿನ ಕುಡಿ ಕಾದಂಬರಿಯಲ್ಲಿ ಜೀವನ ಮೌಲ್ಯ ಎಂಬ ವಿಷಯಾಧಾರಿತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕಾಲೇಜಿನಲ್ಲಿ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಡಾ.ನಾ.ಮೊಗಸಾಲೆ ಬರೆಯುವವನಿಗೆ ಕನಿಷ್ಟ ಮೌಲ್ಯವಾದರೂ ಇರಬೇಕು. ಈ ಹಿನ್ನಲೆಯಲ್ಲಿ ಕಾರಂತರು ಆದರ್ಶಪ್ರಾಯರು. ಅವರ ಕುರಿತಾಗಿ ಮಾತನಾಡುವುದು ಅಥವ ಬರೆಯುವುದೆಂದರೆ ಜೀವನ ಮೌಲ್ಯಗಳ ಬಗೆಗೆ ಚರ್ಚಿಸಿದಂತೆ. ಇಂದು ನಾವೆಲ್ಲಾ ಚಿಂತಿಸುವ ಜಾಗತೀಕರಣದಂತಹ ಸಂಗತಿಗಳನ್ನು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಕಾರಂತರು ವಿಶ್ಲೇಷಿಸಿದ್ದರು ಎಂದರು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ವಿಚಾರಗಳಿಗೆ ಒತ್ತಿಲ್ಲದಿರುವುದು ದುರದೃಷ್ಟಕರ. ಯುವ ಪೀಳಿಗೆಗೆ ಸರಿಯಾಗಿ ಮಾರ್ಗದರ್ಶನ ಮಾಡುವಲ್ಲಿ ಹಿರಿಯರು ಸೋತಿದ್ದಾರೆ. ಆದ್ದರಿಂದಲೇ ಮೌಲ್ಯಗಳ ಅಧಃಪತನವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರಂತ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ತಾಳ್ತಜೆ ವಸಂತ ಕುಮಾರ್ ಕಹಿ ವಾಸ್ತವದ ಜೊತೆಜೊತೆಗೇ ರಮ್ಯ ಬದುಕೂ ಇದೆ. ಅದನ್ನು ಯುವ ಪೀಳಿಗೆ ಅನುಭವಿಸುವಂತಾಗಬೇಕು ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕೆ.ಎಂ.ಭೈರಪ್ಪ ಮೊದಲ ಸ್ಥಾನ ಪಡೆದರೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿದ್ಯಾರ್ಥಿ ಗಿರೀಶ್ ಎಂ.ಜಿ ದ್ವಿತೀಯ ಸ್ಥಾನಕ್ಕೆ ಭಾಜನರಾದರು. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ವಿಜ್ಞಾನ ಪದವಿ ವಿದ್ಯಾರ್ಥಿ ಶರೋನ್ ಅಲೋವೆರಾ ತೃತೀಯ ಸ್ಥಾನ ಪಡೆದರು.
ವೇದಿಕೆಯಲ್ಲಿ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಕೆ.ರಾಮಭಟ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎ.ವಿ.ನಾರಾಯಣ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನನ್ಯಾ ಬಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ವೇದವ್ಯಾಸ ಸ್ವಾಗತಿಸಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಎಚ್.ಮಾಧವ ಭಟ್ ವಂದಿಸಿದರು. ವಿದ್ಯಾರ್ಥಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ನಿರೂಪಿಸಿದರು.

Sunday, April 4, 2010
3
Sunday, April 4, 2010
ಡಾ.ಶ್ರೀಧರ ಎಚ್.ಜಿ.
೦೩.೦೪.೨೦೧೦ ಶನಿವಾರ - ಉಪನ್ಯಾಸ ಮತ್ತು ಕವಿಗೋಷ್ಟಿ
ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಲಿಟರರಿ ಕ್ಲಬ್‌ನ ಸಹಯೋಗದಲ್ಲಿ ಚಂದ್ರಗಿರಿಯ ತೀರ ಕಾದಂಬರಿಯ ಬಗೆಗೆ ಉಪನ್ಯಾಸ, ಅನಂತರ ವಿದ್ಯಾರ್ಥಿಗಳಿಂದ ಬಹುಭಾಷಾ ಕವಿಗೋಷ್ಟಿ ನಡೆಯಿತು.
ಸಾರಾ ಅಬೂಬಕರ್ ೨೫ ವರ್ಷಗಳ ಹಿಂದೆ ಬರೆದ ಕಾದಂಬರಿ ಚಂದ್ರಗಿರಿಯ ತೀರ. ಈ ಕೃತಿ ಪ್ರಕಟವಾಗಿ ೨೫ ವರ್ಷಗಳು ಕಳೆದ ಪ್ರಯುಕ್ತ ಇದರ ಕುರಿತು ಒಂದು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸೂಕ್ಷ್ಮ ಸಂವೇದನೆಯುಳ್ಳ ಕವಿ ಮತ್ತು ವಿಮರ್ಶಕಿ ಡಾ. ಕವಿತಾ ರೈ ಉಪನ್ಯಾಸ ನೀಡುವ ಸಲುವಾಗಿ ಕಾಲೇಜಿಗೆ ಬಂದಿದ್ದರು. "ಮಹಿಳೆ : ಅಸ್ತಿತ್ವದ ಸಂಕಥನ" ಕೃತಿಯಲ್ಲಿ ಈ ಕಾದಂಬರಿಯ ಬಗೆಗೆ ಅವರು ವಿವಿಧ ನೆಲೆಯಲ್ಲಿ ಚಿಂತನೆ ನಡೆಸಿದ್ದಾರೆ. ಮಾತ್ರವಲ್ಲ, ಕನ್ನಡದಲ್ಲಿ ಬಂದಿರುವ ಕೆಲವು ಉತ್ತಮ ವಿಮರ್ಶೆಯ ಕೃತಿಗಳಲ್ಲಿ ಇದೂ ಒಂದು. ಆಸಕ್ತರು ಈ ಕೃತಿಯನ್ನು ನೋಡಬಹುದು.
ಕಳೆದ ಮೂರು ವರ್ಷಗಳಿಂದ ಚಂದ್ರಗಿರಿಯ ತೀರ ಕಾದಂಬರಿಯ ಬಗೆಗೆ ಒಂದು ಉಪನ್ಯಾಸವನ್ನು ಏರ್ಪಡಿಸಬೇಕೆಂದು ಯೋಚಿಸಿದ್ದೆ. ಆದರೆ ಅದು ಕಾರ್ಯಗತವಾಗಿರಲಿಲ್ಲ. ಇಂದು ಅದು ಪ್ರಕಟವಾದ ೨೫ ವರ್ಷವಾದ ಈ ಸಂದರ್ಭದಲ್ಲಿ ಅದು ಈಡೇರಿದೆ.
ಅಂಚಿಗೆ ಸರಿಸಲ್ಪಟ್ಟ ಅಸ್ಮಿತೆಗಳನ್ನು ಸಾಹಿತ್ಯದಲ್ಲಿ ತೋರಿಸಿದ ಸಾರಾ ಅವರ ಸಾಹಿತ್ಯ ವಿಶಿಷ್ಟವಾದುದು. ಧಾರ್ಮಿಕತೆ, ಪುರುಷನಿಷ್ಟ ಸಮಾಜ ಹೆಣ್ಣನ್ನು ದೇಹ ಮಾತ್ರ ಎಂದು ತಿಳಿದಿದೆ. ಮನಸ್ಸು ಇಲ್ಲವೇ ಇಲ್ಲವೆಂಬ ರೀತಿಯಲ್ಲಿ ನೋಡುತ್ತಿದೆ. ಧಾರ್ಮಿಕ ನಿರ್ಣಯಗಳು ಸ್ತ್ರೀಯ ಅಸ್ತಿತ್ವವನ್ನು ಅತಂತ್ರಗೊಳಿಸಿದಾಗ ನಾದಿರನಂತವರು ಆತ್ಮಹತ್ಯೆಯ ಮೂಲಕ ಪ್ರತಿರೋಧವನ್ನು ತೋರುತ್ತಾರೆ. ಕಾದಂಬರಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನೀಡುವ ವಿವಾಹ ವಿಚ್ಚೇದನವೂ ಹೆಣ್ಣಿನ ಬದುಕನ್ನು ವಿಚಲಿತಗೊಳಿಸುತ್ತದೆ. ಅಲ್ಲದೆ ಕಾದಂಬರಿಯಲ್ಲಿ ಎದುರಾಗುವ ಸಮಸ್ಯೆಯ ನಿವಾರಣೆಗೆ ಇರುವ ಹಲವು ಸಾಧ್ಯತೆಯನ್ನು ಲೇಖಕಿ ತೆರೆದಿಡುತ್ತಾ ಹೋಗುತ್ತಾರೆ. ಆದರೆ ಪುರುಷನಿಷ್ಠ ವ್ಯವಸ್ಥೆ ಇದರ ಕಡೆಗೆ ಗಮನಿಸದೆ ತನ್ನ ಮೂಗಿನ ನೇರಕ್ಕೆ ವ್ಯವಹರಿಸುತ್ತದೆ ಎಂದು ಡಾ. ಕವಿತಾ ರೈ ಉದಾಹರಣೆ ಸಹಿತ ವಿವರಿಸಿದರು.
ಕಾರ್ಯಕ್ರಮದ ಎರಡನೆಯ ಭಾಗವಾಗಿ ನಡೆದ ಕವಿಗೋಷ್ಟಿಯಲ್ಲಿ ಕನ್ನಡ, ತುಳು, ಹವಿಗನ್ನಡ, ಹಿಂದಿ, ಕೊಡವ, ಇಂಗ್ಲಿಷ್ ಮೊದಲಾದ ಭಾಷೆಯಲ್ಲಿ ಬರೆದ ಕವನಗಳನ್ನು ವಿದ್ಯಾರ್ಥಿಗಳು ವಾಚಿಸಿದರು. ಇವರ ಕವಿತೆಗಳು ವರ್ತಮಾನದ ವಿವಿಧ ಸಮಸ್ಯೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾದವು.
ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವುದಕ್ಕೆ ಇಂತಹ ಕವಿಗೋಷ್ಟಿಗಳು ಪ್ರೇರಣೆಯಾಗುತ್ತವೆ. ಜಗತ್ತಿನಲ್ಲಿ ಕವನಕ್ಕೆ ವಸ್ತುವಾಗಬಲ್ಲ ಸಂಗತಿಗಳು ಸಾಕಷ್ಟಿವೆ. ಆದರೆ ಅವುಗಳನ್ನು ನಾವು ಹೇಗೆ ನೋಡುತ್ತೇವೆ ಮತ್ತು ಅಭಿವ್ಯಕ್ತಿಸುತ್ತೇವೆ ಎಂಬುದು ಮುಖ್ಯ. ಜನರ ಮನಸ್ಸನ್ನು ತಟ್ಟುವ ಭಾವನೆಗಳು ಕಾವ್ಯವಾಗುತ್ತದೆ. ಕಾವ್ಯವನ್ನು ಬರೆಯಲು ಕಾವ್ಯಭಾಷೆ ಮತ್ತು ವ್ಯವಧಾನವಿರಬೇಕು ಎಂದು ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಮಾಧವ ಭಟ್ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲದೆ ಡಾ. ಇಂದಿರಮ್ಮ, ಡಾ. ಕವಿತಾ ರೈ, ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಮಾಧವ ಭಟ್ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಶ್ರೀಧರ ಎಚ್. ಜಿ. ಸ್ವಾಗತಿಸಿದರು. ಭರತ್‌ರಾಜ್ ವಂದಿಸಿದರು. ಶ್ರೀಮತಿ ಮೋತಿಬಾಯಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

Sunday, March 28, 2010
0
Sunday, March 28, 2010
ಡಾ.ಶ್ರೀಧರ ಎಚ್.ಜಿ.
ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ - ವಿಚಾರಗೋಷ್ಟಿ
ಬಾಲವನ ಕನ್ನಡಿಗರಿಗೆಲ್ಲ ಪವಿತ್ರವಾದ ಸ್ಥಳ. ಶಿವರಾಮ ಕಾರಂತರಿಂದಾಗಿ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಪುತ್ತೂರಿಗೆ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲವನದಲ್ಲಿ ನಿರಂತರವಾಗಿ ಸಾಹಿತ್ಯದ ಚಟುವಟಿಕೆಗಳು ನಡೆಯಬೇಕು. ಇಂದಿನ ವಿಚಾರಗೋಷ್ಟಿ ಚರ್ಚೆಗೆ ಆರಿಸಿಕೊಂಡಿರುವ ಉಗ್ರಾಣ ಮಂಗೇಶರಾವ್, ಎ.ಪಿ. ಸುಬ್ಬಯ್ಯ, ಕೆದಂಬಾಡಿ ಜತ್ತಪ್ಪ ರೈ, ಪ್ರೊ. ಬಿ. ಲೀಲಾಭಟ್ ಇವರೆಲ್ಲರೂ ಕಾರಂತರಿಗೆ ಹತ್ತಿರದವರಾಗಿದ್ದರು. ಅವರ ಬಗೆಗೆ ಬಾಲವನದಲ್ಲಿ ವಿಚಾರಗೋಷ್ಟಿ ನಡೆಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಇಂದು ವಿದ್ಯಾರ್ಥಿಗಳು ಕನ್ನಡದ ಕೆಲಸದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಎನ್. ಸುಬ್ರಹ್ಮಣ್ಯಂ ಹೇಳಿದರು.
ಅವರು ಡಾ. ಶಿವರಾಮಕಾರಂತ ಬಾಲವನ ಸಮಿತಿ, ಕನ್ನಡ ಸಂಘ ಸಂತ ಫಿಲೋಮಿನಾ ಕಾಲೇಜು, ಕನ್ನಡ ಸಂಘ, ವಿವೇಕಾನಂದ ಕಾಲೇಜು ಇದರ ಸಹಯೋಗದಲ್ಲಿ ಬಾಲವನದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ ಎಂಬ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೌದ್ಧಿಕವಾಗಿ ಮತ್ತು ಬೌತಿಕವಾಗಿ ಬಾಲವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಕೆಲಸದಲ್ಲಿ ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕೆಂದು ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಆದ ಡಾ. ಹರೀಶ್ ಕುಮಾರ್ ಹೇಳಿದರು.
ಪ್ರೊ. ವಿಷ್ಣುಭಟ್ ಸ್ವಾಗತಿಸಿದರು. ಪ್ರೊ. ಆರ್. ವೇದವ್ಯಾಸ ವಂದಿಸಿದರು. ಬಸ್ತಿಯಾಂ ಪಾಯಸ್ ಕಾರ್ಯಕ್ರಮ ನಿರ್ವಹಿಸಿದರು.
ಅನಂತರ ನಡೆದ ವಿಚಾರಗೋಷ್ಟಿಯಲ್ಲಿ ಉಗ್ರಾಣ ಮಂಗೇಶ್ ರಾವ್ ಬದುಕು ಬರಹ ಎಂಬ ವಿಷಯದ ಮೇಲೆ ಡಾ. ಸುಬ್ರಹ್ಮಣ್ಯ ಭಟ್ ಪ್ರಬಂಧವನ್ನು ಮಂಡಿಸಿದರು. ಉಗ್ರಾಣರು ತಮ್ಮ ಬದುಕಿನಲ್ಲಿ ಎದುರಾದ ಸಂಘರ್ಷವನ್ನು ಮೀರಿ ನಿಂತವರು. ಅವರ ಕಾವ್ಯ, ಕಥೆಗಳು ಅತ್ಯಂತ ಸುಂದರವಾಗಿದೆ. ಹೃದ್ಯವಾದ ಗದ್ಯ ಅವರದು. ಪ್ರಾಚೀನ ಛಂದಸ್ಸನ್ನು ಬಳಸಿದ್ದರಿಂದ ಅವರ ಕವಿತೆಗಳು ಜನಪ್ರಿಯವಾಗಲಿಲ್ಲ. ಮಾನಂ ಪರಿಮಳಿಸಿ ಬೀಳ್ವುದೇ ಧನ್ಯಂ ಎಂಬ ಆದರ್ಶ ಉಗ್ರಾಣರದಾಗಿತ್ತು ಎಂದು ಉದಾಹರಣೆ ಸಹಿತ ವಿವರಿಸಿದರು.
ಎ.ಪಿ. ಸುಬ್ಬಯ್ಯನವರು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ಅನುವಾದಿಸಿದ ದು:ಖಾರ್ತರು ಕೃತಿ ಇಂದಿಗೂ ಮಹತ್ವದ್ದಾಗಿದೆ. ಪುತ್ತೂರು ಕರ್ನಾಟಕ ಸಂಘದ ಮೊದಲ ಅಧ್ಯಕ್ಷರಾಗಿದ್ದ ಎ.ಪಿ ಸುಬ್ಬಯ್ಯನವರು ಕಾರಂತರ ಕೆಲಸಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಧಿಕಾರಕ್ಕಾಗಿ ಹಂಬಲಿಸದ ನಿಜ ಅರ್ಥದಲ್ಲಿ ಮೌಲ್ಯಭರಿತ ರಾಜಕಾರಣ ಅವರದಾಗಿತ್ತು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅವರಿಗೆ ಪ್ರೌಢಿಮೆ ಇರುವುದರಿಂದ ಅನುವಾದ ಕಲೆ ಅವರಿಗೆ ಸಿದ್ದಿಸಿತ್ತು ಎಂದು ಡಾ. ಎ.ಪಿ. ರಾಧಾಕೃಷ್ಣ ಹೇಳಿದರು. ಅಜ್ಜನ ಬಗೆಗೆ ಮೊಮ್ಮಗ ಪ್ರಬಂಧವನ್ನು ಮಂಡಿಸಿದ್ದು ಹಲವರ ಗಮನ ಸೆಳೆತು.
ಕಾಡು ಸೃಜನಶೀಲತೆಯ ಆಗರ. ಮನುಷ್ಯನ ಬದುಕು ಪ್ರಕೃತಿಯ ಒಡಲಿನಲ್ಲಿ ಅರಳಬೇಕು ಎಂದು ಮಾತಿಗೆ ತೊಡಗಿದ ಧನಂಜಯ ಕುಂಬ್ಳೆ ಜತ್ತಪ್ಪ ರೈಯವರ ಸಾಹಿತ್ಯದಲ್ಲಿ ಕಾಡಿನ ಹಸಿರಿದೆ. ಮನುಷ್ಯನ ಉಸಿರಿದೆ. ಅವರು ಬರೆದ ಬೇಟೆಯ ಸಾಹಿತ್ಯ ಅನನ್ಯವಾದುದು. ಕನ್ನಡಲ್ಲಿ ಬೇಟೆ ಸಾಹಿತ್ಯಕ್ಕೆ ಕೆದಂಬಾಡಿಯೇ ಸಾಮ್ರಾಟ. ಹಾಗೆಯೇ ಕೆದಂಬಾಡಿಯವರು ತುಳುವಿಗಾಗಿ ಮಾಡಿದ ಕೆಲಸ ಸರಿಯಾಗಿ ಗುರುತಿಸಲ್ಪಟ್ಟಿಲ್ಲ. ಅವರು ತುಳುವಿಗೆ ಅನುವಾದಿಸಿದ ಕೃತಿಗಳು ಮೂಲಕ್ಕಿಂತ ಭಿನ್ನವಾಗಿ ತುಳು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ತೆರೆದುಕೊಳ್ಳುತ್ತವೆ. ಕೆದಂಬಾಡಿಯವರ ಕೃತಿಗಳಲ್ಲಿ ತುಳುವಿನ ಸಾಂಸ್ಕೃತಿಕ ಮೌಲ್ಯಗಳನ್ನು ಆವರಿಸಿಕೊಂಡಿವೆ. ತುಳುಭೀಷ್ಮನ ಕೃತಿಗಳು ಮತ್ತೊಮ್ಮೆ ಎಲ್ಲರಿಗೂ ಸಿಗುವಂತಾಗಲಿ ಎಂದು ಆಶಿಸಿದರು.
ಶಿವರಾಮ ಕಾರಂತರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಪ್ರೊ. ಬಿ. ಲೀಲಾಭಟ್ಟರು ಗ್ರಂಥಸಂಪಾದನೆಯಲ್ಲಿ ಒಂದು ಮಾದರಿಯನ್ನು ನಿರ್ಮಿಸಿದ್ದಾರೆ. ಕರಡು ತಿದ್ದುವಲ್ಲಿ ಅವರ ತಾಳ್ಮೆ ಮೆಚ್ಚುವಂತದು. ಉಗ್ರಾಣ, ಎಂ.ಎನ್. ಕಾಮತ್ ಕೃತಿಗಳು ಇವರನ್ನು ಮತ್ತೊಮ್ಮೆ ಕನ್ನಡಿಗರಿಗೆ ಪರಿಚಯಿಸಿವೆ. ಅವರ ಕೃತಿಗಳಲ್ಲಿ ಮಾಹಿತಿಗಳು ಸಿಗುವಷ್ಟು ಚಿಂತನೆಗೆ ಪೂರಕವಾದ ಅಂಶಗಳು ದೊರೆಯುವುದಿಲ್ಲ ಎಂದು ಶ್ರೀಮತಿ ತುಳಸಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ. ರಾಜಮಣಿಯವರದು. ಇಂದು ವಿಚಾರಗೋಷ್ಟಿಯಲ್ಲಿ ಚರ್ಚೆಗೆ ಒಳಗಾದ ಹಿರಿಯ ವಿದ್ವಾಂಸರು ಇತಿಹಾಸಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಇತಿಹಾಸವನ್ನು ಮುರಿಯುವ ಕೆಲಸ ನಡೆಯುತ್ತಿದೆ. ಅದನ್ನು ಮರುರೂಪಿಸುವ ಕೆಲಸ ನಡೆಯಬೇಕು. ಇಂದು ಹೃದಯವನ್ನು ತಟ್ಟುವ ಸಾಹಿತ್ಯ ಅಗತ್ಯವಾಗಿದೆ. ಸಹಜವಾದ ಭಾಷೆಯಿಂದ ಸಾಮಾನ್ಯರನ್ನು ತಲುಪಲು ಸಾಧ್ಯ. ಒಂದು ಕಾಲದಲ್ಲಿ ನಂಬಿದ ಮೌಲ್ಯಗಳು ಇಂದು ಮರೆವಿನ ಅಂಚಿಗೆ ಹೋಗುತ್ತಿವೆ. ಸಾಹಿತ್ಯ ಮತ್ತು ಸಂಸ್ಕೃತಿಪರ ಚಟುವಟಿಕೆಯಿಂದ ಇವುಗಳನ್ನು ಉಳಿಸಲು ಸಾಧ್ಯ ಎಂದು ರಾಜಮಣಿಯವರು ಹೇಳಿದರು.
ವಿಚಾರಗೋಷ್ಟಿಯ ಕೊನೆಯಲ್ಲಿ ಡಾ. ಶ್ರೀಧರ ಎಚ್. ಜಿ. ವಂದಿಸಿದರು. ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿವೇಕಾನಂದ ಕಾಲೇಜು, ಫಿಲೋಮಿನಾ ಕಾಲೇಜು, ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜು ಮತ್ತು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಿಂದ ಬಂದ ೧೭೫ ಮಂದಿ ವಿದ್ಯಾರ್ಥಿಗಳು ವಿಚಾರಗೋಷ್ಟಿಯಲ್ಲಿ ಭಾಗವಹಿಸಿದ್ದರು.

Sunday, March 14, 2010
1
Sunday, March 14, 2010
ಡಾ.ಶ್ರೀಧರ ಎಚ್.ಜಿ.
ನೆನಪಿನಂಗಳ - ಶಾಲೆಯ ಮೊದಲ ದಿನ
ನನಗಾಗ ಆರು ವರ್ಷ. ನಮ್ಮ ತಂದೆ ನನ್ನನ್ನು ಶಾಲೆಗೆ ಸೇರಿಸುವುದರ ಬಗೆಗೆ ಚಿಂತಿತರಾಗಿದ್ದರು. ಮನೆಂದ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗುವುದು ದೂರ. ಅದೂ ಟಾರು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ವಾಹನಗಳ ಸಂಚಾರವಿರುವ ರಸ್ತೆ. ಮಳೆಗಾಲದಲ್ಲಿ ಇನ್ನಷ್ಟು ಕಷ್ಟ. ಹೀಗಾಗಿ ಸಾಕಷ್ಟು ಯೋಚಿಸಿ ನನ್ನನ್ನು ಸಾಲೆಕೊಪ್ಪದಲ್ಲಿ ಶಾಲೆಗೆ ಸೇರಿಸಿದರು. ಇದು ನನ್ನ ತಂದೆಯ ಮೂಲಮನೆ. ಇಲ್ಲಿ ನನ್ನ ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಅವರ ಮಕ್ಕಳು ಇದ್ದರು. ಕೂಡು ಕುಟುಂಬ. ತುಂಬಿದ ಸಂಸಾರ. ಶಾಲೆ ಆರಂಭವಾಗುವ ಮೊದಲ ದಿನ ಸಂಜೆ ನನ್ನನ್ನು ತಂದೆ ಕರೆದುಕೊಂಡು ಸಾಲೆಕೊಪ್ಪಕ್ಕೆ ಹೋದರು. ನನಗೆ ಮಾತ್ರ ಅಪ್ಪ, ಅಮ್ಮನನ್ನು ಬಿಟ್ಟು ಹೋಗುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಮರುದಿನ ಬೆಳಿಗ್ಗೆ ಅಜ್ಜಿ ದೊಡ್ಡವರಿಗೆಲ್ಲ ತಿಂಡಿ ಕೊಟ್ಟರು. ನಮ್ಮಂತಹ ಮಕ್ಕಳಿಗೆ ಬೆಳ್ತಿಗೆ ಅಕ್ಕಿಯ ಗಂಜಿ ಊಟ ! ಮನೆಯಲ್ಲಿ ತಿಂಡಿ ತಿಂದು ಅಭ್ಯಾಸವಿದ್ದ ನನಗೆ ಗಂಜಿ ಊಟ ಸ್ವಲ್ಪವೂ ಇಷ್ಟವಾಗಲಿಲ್ಲ. ಇದು ಹೀಗೇ ಆದರೆ ಹೇಗೆಂಬ ಚಿಂತೆ ಕಾಡತೊಡಗಿತು.
ಅದು ಜೂನ್ ತಿಂಗಳು. ಮಳೆಗಾಲದ ಸಮಯ. ಅದೂ ಮಲೆನಾಡಿನ ಮಳೆ. ಹಿಡಿದರೆ ಬಿಡುವ ಪ್ರಶ್ನೆ ಇರಲಿಲ್ಲ. ಮುಂಜಾನೆಂದಲೇ ಮಳೆ ಆರಂಭವಾಗಿತ್ತು. ೯.೩೦ರ ಹೊತ್ತಿಗೆ ತಂದೆ ನನ್ನನ್ನು ಮನೆಯ ಸಮೀಪದಲ್ಲಿಯೇ ಇದ್ದ ಶಾಲೆಗೆ ಕರೆದುಕೊಂಡು ಹೋದರು. ಪ್ರವೇಶಾತಿಯ ಪ್ರಕ್ರಿಯೆಗಳನ್ನು ಮುಗಿಸಿ ಶನಿವಾರ ಬರುತ್ತೇನೆ ಎಂದು ತಂದೆ ಮರೆಯಾದರು. ನಾನು ಶಾಲೆಯ ಕಟ್ಟೆಯ ಮೇಲೆ ನಿಂತು ಅವರು ನನಗೆ ಬೆನ್ನುಹಾಕಿ ಹೋಗುವುದನ್ನು ನೋಡುತ್ತಾ ನಿಂತಿದ್ದೆ. ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಇಳಿಯುತ್ತಿತ್ತು.
ತಂದೆ ಮರೆಯಾಗುತ್ತಿದ್ದಂತೆ ಅಧ್ಯಾಪಕರು ಬಂದು ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಹಲಗೆ ಮಣೆಯ ಮೇಲೆ ಕೂರಿಸಿದರು. ಒಂದರಿಂದ ನಾಲ್ಕನೆಯ ತರಗತಿಯವರೆಗೆ ಸುಮಾರು ಇಪ್ಪತ್ತು ಮಕ್ಕಳಿದ್ದೆವು. ಒಬ್ಬ ಅಧ್ಯಾಪಕರಿದ್ದರು. ಬರೆಯಲು ತಂದ ಸ್ಲೇಟಿನ ಮೇಲೆ ಅಕ್ಷರವನ್ನು ಬರೆದು ತಿದ್ದಲು ಹೇಳಿದರು. ನಾನು ನನಗೆ ಕಂಡಹಾಗೆ ತಿದ್ದಿದೆ. ಮಧ್ಯಾಹ್ನ ಊಟಕ್ಕೂ ಹೋಗಿಬಂದೆ. ಮಧ್ಯಾಹ್ನದ ನಂತರ ನನಗೇಕೋ ಈ ವ್ಯವಸ್ಥೆ ಸರಿಹೊಂದುವುದಿಲ್ಲ ಎಂಬ ಭಾವನೆ ಬರತೊಡಗಿತು. ಅನಾಥ ಪ್ರಜ್ಞೆ, ಏಕಾಕಿತನ ಮನಸ್ಸನ್ನು ಆವರಿಸತೊಡಗಿತು. ಸಂಜೆ ಶಾಲೆ ಬಿಡುವ ಹೊತ್ತಿಗೆ ಈ ಭಾವನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಇಲ್ಲಿಂದ ಹೊರಟು ಬಿಡಬೇಕು ಎಂಬ ತೀರ್ಮಾನಕ್ಕೆ ಬಂದೆ. ಶಾಲೆ ಬಿಡುತ್ತಿದ್ದಂತೆ ಅಜ್ಜನ ಮನೆಗೆ ಹೋಗಿ ಸ್ಲೇಟನ್ನು ಒಂದು ಮೂಲೆಯಲ್ಲಿಟ್ಟೆ. ಅಜ್ಜಿ ತಿನ್ನಲು ಬೆಳಿಗ್ಗೆ ಮಾಡಿಟ್ಟಿದ್ದ ದೋಸೆಯನ್ನು ಕೊಟ್ಟರು. ತಿಂಡಿ ತಿಂದು ಹೊರಗೆ ಬಂದವನೇ ಮತ್ತೊಮ್ಮೆ ಯೋಚಿಸಿದೆ. ಅಜ್ಜನ ಮನೆಯಿಂದ ನಮ್ಮ ಮನೆರುವ ಸ್ಥಳ ಮುಂಡಿಗೆಹಳ್ಳಕ್ಕೆ ಸುಮಾರು ಮೂರು ಮೈಲಿ ದೂರ. ನಡೆದುಕೊಂಡು ಹೋಗಲು ಮುಕ್ಕಾಲು ಘಂಟೆಂದ ಒಂದು ಘಂಟೆ ಬೇಕು. ನಡುವೆ ಎರಡು ಹೊಳೆ. ನಿರ್ಜನ ಪ್ರದೇಶ. ಒಬ್ಬನೇ ಹೋಗಬಹುದೆಂದು ತೀರ್ಮಾನಿಸಿ ನನ್ನ ಕೊಡೆ ಹಿಡಿದುಕೊಂಡು ಯಾರಿಗೂ ಕಾಣದಂತೆ ಮನೆ ಬಿಟ್ಟೆ.
ಸಾಲೆಕೊಪ್ಪ ಊರು ಕಳೆಯುತ್ತಿದ್ದಂತೆ ಮೊದಲ ಹೊಳೆ ಸಿಗುತ್ತದೆ. ಇದನ್ನು ದಾಟಲು ಆಗ ಸೇತುವೆ ಇರಲಿಲ್ಲ. (ಈಗ ಸೇತುವೆಯಿದೆ) ಹೊಳೆಯ ಬುಡಕ್ಕೆ ಬಂದು ನೋಡಿದರೆ ಸಾಕಷ್ಟು ನೀರು ತುಂಬಿ ಹರಿಯುತ್ತಿತ್ತು. ನನಗೆ ಅದನ್ನು ನೋಡಿ ನಿಜಕ್ಕೂ ಭಯವಾಯಿತು. ಸ್ವಲ್ಪದೂರ ಹೊಳೆಯಲ್ಲಿ ನಿಧಾನವಾಗಿ ಹೋದೆ. ಹೊಳೆಯ ನಡುವೆ ಬಂದಾಗ ಸೆಳವು ತೀವ್ರವಾಗಿತ್ತು. ಕಾಲಕೆಳಗಿನ ಮರಳು ಬಿರುಸಿನಿಂದ ನೀರಿನೊಡನೆ ಕೊಚ್ಚಿಹೋಗುತ್ತಿತ್ತು. ನಾನು ಹೊಳೆಯಲ್ಲಿ ತೇಲಿ ಹೋಗುತ್ತೇನೆ ಎನಿಸಿತು. ಆದರೂ ಹಿಂದಕ್ಕೆ ಮರಳುವ ಆಲೋಚನೆ ಬರಲೇ ಇಲ್ಲ. ಏನಾದರಾಗಲಿ ಎಂದು ನಿಧಾನವಾಗಿ ಸಾವರಿಸಿಕೊಳ್ಳುತ್ತ ಒಂದೊಂದೇ ಹೆಜ್ಜೆಯನ್ನಿಟ್ಟು ಮುಂದುವರಿದೆ. ಆತಂಕಗಳ ನಡುವೆ ಮೊದಲ ಕಂಟಕ ಮುಗಿದಿತ್ತು. ನಾನು ಸಾಲೆಕೊಪ್ಪದ ಹೊಳೆಯನ್ನು ದಾಟಿದ್ದೆ.
ಈಗ ಮತ್ತೊಮ್ಮೆ ಆಲೋಚನೆಗಿಟ್ಟುಕೊಂಡಿತು. ಮುಂದೆ ಸಿಗುವ ಹೊಳೆ ಇದಕ್ಕಿಂತ ದೊಡ್ಡದು. ನೀರೂ ಹೆಚ್ಚಿರುತ್ತದೆ ಎಂಬ ಆಲೋಚನೆ ಬಂತು. ತಕ್ಷಣ ನನ್ನ ದಾರಿಯನ್ನು ಬದಲಾಸಿದೆ. ಮೊದಲಿನ ಯೋಜನೆಯ ಪ್ರಕಾರ ಪುರ ಎಂಬ ಊರಿನ ಮೂಲಕ ನಾನು ಮುಂಡಿಗೆಹಳ್ಳದ ಹೊಳೆಯನ್ನು ದಾಟಿ ಮನೆ ಸೇರಬೇಕಾಗಿತ್ತು. ಆದರೆ ಮುಂಡಿಗೆ ಹಳ್ಳದ ಹೊಳೆಗೆ ಹೆದರಿ ದಾರಿಯನ್ನು ಬದಲಾಸಿದೆ. ಇದು ಸುತ್ತುಬಳಸಿನ ದಾರಿ. ಸಮಯವೂ ಹೆಚ್ಚು ಬೇಕು. ಆದರೆ ಧೈರ್ಯಮಾಡಿ ಹೊಸದಾರಿಯನ್ನು ಹಿಡಿದೆ. ನನ್ನ ಜೊತೆಗೆ ಇದ್ದದ್ದು ಒಂದು ಕೊಡೆ ಮಾತ್ರ.
ಸಂಜೆಯಾಗತೊಡಗಿತ್ತು. ಮಳೆಗಾಲವಾದ್ದರಿಂದ ಕತ್ತಲಾಗುವುದು ತುಸು ಬೇಗ. ಹೀಗಾಗಿ ನಡೆಯುವುದನ್ನು ಬಿಟ್ಟು ಅಷ್ಟಷ್ಟು ದೂರ ಓಡತೊಡಗಿದೆ. ಗಾಡಿಗೆರೆ, ಕಲ್ಮಕ್ಕಿಯನ್ನು ದಾಟಿ ಹುಳೆಗಾರು ದೇವಸ್ಥಾನದ ಹತ್ತಿರ ಬರುವಾಗ ಅಲ್ಲಿ ನನ್ನ ತಾಯಿಯ ಮನೆಯ ಪಕ್ಕದ ರಾಮಣ್ಣ ಮತ್ತು ಇತರರು ವಾಲಿಬಾಲ್ ಆಡುತ್ತಿದ್ದರು. ಅವರಿಗೆ ಕಾಣಬಾರದೆಂದು ಕೊಡೆಯನ್ನು ಬಿಡಿಸಿ ಅವರಿಗೆ ಮುಖ ಕಾಣದಂತೆ ಮಾಡಿಕೊಂಡು ದೇವಸ್ಥಾನದ ಸಮೀಪ ಎಡಕ್ಕೆ ತಿರುಗಿ ಕಾಲುದಾರಿಯನ್ನು ಹಿಡಿದೆ. ನಿರ್ಜನ ಪ್ರದೇಶ. ಕಾಡುಬೇರೆ. ಇಲ್ಲಿನ ಕಾಡು ಕಳೆಯುವವರೆಗೆ ಓಡಿದೆ. ಕತ್ತಲಾಗುವ ಹೊತ್ತಿಗೆ ಮನೆ ಸೇರಿದೆ. ನನ್ನನ್ನು ನೋಡಿ ಅಮ್ಮನಿಗೆ ಆಶ್ಚರ್ಯ ಮತ್ತು ಗಾಬರಿ ! ಈ ಮಳೆಯಲ್ಲಿ ಹೇಗೆ ಬಂದೆ ಎಂದು ಕೇಳಿದರು. ತಂದೆ ಹೊರಗೆ ಹೋಗಿದ್ದವರು ಮನೆಗೆ ಬಂದರು. ನನ್ನನ್ನು ನೋಡಿ ಅವರಿಗೂ ಆಶ್ಚರ್ಯ. ಇವನು ಹೊಳೆ ದಾಟಿ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರದು. ಮನೆಯಲ್ಲಿ ಹೇಳಿ ಬಂದಿದ್ದೀಯ ಎಂದು ಕೇಳಿದರು. ನಾನು ಮಾತನಾಡಲಿಲ್ಲ. ನಕಾರಾತ್ಮಕವಾಗಿ ತಲೆಯಾಡಿಸಿದೆ. ಇದನ್ನು ನೋಡಿ ಅವರಿಗೂ ಕಳವಳ ಆರಂಭವಾಯಿತು. ಬೆಳಿಗ್ಗೆಯೇ ಎದ್ದು ಸಾಲೆಕೊಪ್ಪಕ್ಕೆ ಹೋಗಿ ಹೇಳಿ ಬರಬೇಕು ಎಂದು ನಿರ್ಧರಿಸಿದರು. ಈಗಿನ ಹಾಗೆ ಸಂಪರ್ಕಿಸುವುದಕ್ಕೆ ದೂರವಾಣಿಗಳು ಇಲ್ಲದ ಕಾಲವದು. ರಾತ್ರಿ ಊಟವಾಗುವ ಹೊತ್ತಿಗೆ ಚಿಕ್ಕಪ್ಪ ಸಾಲೆಕೊಪ್ಪದಿಂದ ನನ್ನನ್ನು ಹುಡುಕಿಕೊಂಡು ಬಂದರು. ಎಲ್ಲರೂ ಒಟ್ಟು ಸೇರಿ ನನ್ನನ್ನು ಗದರಿದರು. ನಾನು ಅಳುತ್ತ ನಿಂತಿದ್ದೆ. ಚಿಕ್ಕಪ್ಪ ರಾತ್ರಿ ಉಳಿದುಕೊಂಡು ಬೆಳಿಗ್ಗೆ ಹಿಂದಿರುಗಿ ಹೋದರು.
ಇದಾಗಿ ಒಂದು ವಾರದ ನಂತರ ನನ್ನನ್ನು ಮನೆಯಿಂದ ಒಂದೂವರೆ ಮೈಲಿ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಸೇರಿಸಿದರು. ಇದು ಬಟಾಬಯಲಿನಲ್ಲಿ ಇದ್ದ ಶಾಲೆ. ಮಧ್ಯಾಹ್ನಕ್ಕೆ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆ. ಮಳೆಗಾಲದಲ್ಲಿ ನೀರು ಕಡಿಮೆ ಇದ್ದರೆ ಮನೆಯ ಸಮೀಪದಲ್ಲಿ ಹರಿಯುತ್ತಿದ್ದ ಮುಂಡಿಗೆ ಹಳ್ಳದ ಹೊಳೆಯನ್ನು ಅಪ್ಪ ದಾಟಿಸುತ್ತಿದ್ದರು. ಆಲಳ್ಳಿ ಗುಡ್ಡದಲ್ಲಿ ಕಾಲ್ದಾರಿಯಲ್ಲಿ ನುಸುಳಿ ಶಾಲೆ ಸೇರುತ್ತಿದ್ದೆ. ಮಾರ್ಗದಲ್ಲಿ ಬೇಕಾದಷ್ಟು ಹೊಳೆದಾಸವಾಳ ಹಣ್ಣು ತಿನ್ನಲು ಸಿಗುತ್ತಿತ್ತು. ಹೊಳೆ ತುಂಬಿದ್ದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇಲ್ಲಿ ನನಗೆ ಈಶ್ವರನಾಯ್ಕ ಎಂಬ ಅಧ್ಯಾಪಕರಿದ್ದರು. ಇದು ಏಕೋಪಾಧ್ಯಾಯ ಶಾಲೆಯಾದ್ದರಿಂದ ಗುರುಗಳು ಬಂದ ನಂತರ ಬಾಗಿಲು ತೆರೆಯುತ್ತಿತ್ತು. ತರಗತಿಯ ಕಸ ಹೊಡೆಯುವುದು, ಬೆಲ್ ಹೊಡೆಯುವುದು ನೀರು ತಂದಿಡುವುದು ಮುಂತಾದ ಕೆಲಸವನ್ನು ನಾವೇ ಮಾಡಬೇಕಾಗಿತ್ತು. ಆಲಳ್ಳಿಯ ಈ ಶಾಲೆಯಲ್ಲಿ ನಾನು ಎರಡು ವರ್ಷ ಕಲಿತೆ. ಆದರೂ ಇದರಲ್ಲಿ ಒಂದು ಸಂತೋಷವಿತ್ತು. ಅಪ್ಪ, ಅಮ್ಮನ ಸಾಮೀಪ್ಯದ ಸುಖವಿತ್ತು. ಇಲ್ಲಿಂದ ಮುಂದೆ ಶಾಲೆ ನನಗೆ ಯಾವಾಗಲೂ ಬೇಸರ ತರಿಸಿದ್ದಿಲ್ಲ.

Subscribe to:
Posts (Atom)