Friday, December 25, 2009

2

ಇದು ಏಕೆಂದರೆ...

  • Friday, December 25, 2009
  • ಡಾ.ಶ್ರೀಧರ ಎಚ್.ಜಿ.
  • Share
  • ಈ ಬ್ಲಾಗ್ ಯಾಕೆ?

    ಹೀಗಂತ ಹಲವರಿಗೆ ಅನ್ನಿಸಬಹುದು. ಬಿಡಿ ನಿಮಗೇನು? ನನಗೇ ಅನ್ನಿಸಿದೆ! ಆದರೆ ಇದನ್ನು ಮಾಡಲೇಬೇಕಾದ ಅನಿವಾರ್ಯತೆ ಈ ಹಿನ್ನೆಲೆಯಲ್ಲಿ ನಾನು ಪ್ರವೃತ್ತನಾಗುವಂತೆ ಪ್ರೇರೇಪಿಸಿತು.

    ನಾನು ಕೆಲಸ ಮಾಡುವ ಸಂಸ್ಥೆ ಪುತ್ತೂರಿನ ವಿವೇಕಾನಂದ ಕಾಲೇಜು 1965ರಲ್ಲಿ ಆರಂಭವಾಗಿದ್ದು ಇದೀಗ 45ರ ಹರಯದಲ್ಲಿದೆ. ಇಲ್ಲಿ ಓದಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ಪ್ರಪಂಚದ ನಾನಾ ಕಡೆಗಳಲ್ಲಿ ಚದುರಿಹೋಗಿದ್ದಾರೆ. ಅವರ ಸಂಬಂಧವನ್ನು ಮತ್ತೆ ಸಂಸ್ಥೆಯೊಂದಿಗೆ ಬೆಸೆಯುವ ದೃಷ್ಟಿಯಿಂದ ಈ ಬ್ಲಾಗನ್ನು ಆರಂಭಿಸಿದೆ.

    ಕಾಲೇಜಿನಲ್ಲಿ ನಿರಂತರವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳ ವಿವರ, ಕಾಲೇಜಿನ ಆಗು ಹೋಗುಗಳು, ಸಾಹಿತ್ಯ, ಸಂಸ್ಕೃತಿ, ಪುಸ್ತಕ ವಿಮರ್ಶೆ ಇತ್ಯಾದಿ ವಿಷಯಕ್ಕೆ ಸಂಬಂಧಿಸಿದ ಬರಹಗಳು ಕಾಣಿಸಿಕೊಳ್ಳಲಿವೆ. ಹಾಗೆಯೇ ಹವ್ಯಕ ಭಾಷೆಯಲ್ಲಿ ಬಳಕೆಯಲ್ಲಿರುವ ಅಪರೂಪದ ಶಬ್ದಗಳ ವಿವರಣೆಗಳೂ ಇರುತ್ತವೆ.

    2 Responses to “ಇದು ಏಕೆಂದರೆ...”

    ವೆಂಕಟಕೃಷ್ಣ ಕೆ ಕೆ ಪುತ್ತೂರು said...
    February 4, 2010 at 10:03 AM

    ವಿದ್ಯಾರ್ಥಿಗಳ ಮಿಂಚಂಚೆ ವಿಳಾಸ ಸಂಗ್ರಹಿಸಿದಲ್ಲಿ,ಮತ್ತು ಅವರು ಈ ಬ್ಲಾಗ್ ನ್ನು follow ಮಾಡುವಂತೆ,ಪ್ರಯತ್ನ ಮಾಡಿದಲ್ಲಿ ಸಂಪರ್ಕಕ್ಕೆ ಸುಲಭ ಮತ್ತು ತಮ್ಮ ಕನಸುಕೈಗೂಡಬಹುದು.


    dhananjaya kumble said...
    March 29, 2010 at 9:48 PM

    sirimanege pravesha madiddene olleya prayatna. chennagide


    Subscribe