Sunday, August 7, 2011

0

ಚಂದ್ರಭಟ್ಟರ ಮನೆಯಲ್ಲಿ ಒಂದು ವರ್ಷ

  • Sunday, August 7, 2011
  • ಡಾ.ಶ್ರೀಧರ ಎಚ್.ಜಿ.
  • ಚಂದ್ರಭಟ್ಟರದು ಆ ಕಾಲಕ್ಕೆ ಪುಟ್ಟ ಸಂಸಾರ. ಇವರಿಗೆ ಒಬ್ಬಳು ಮಗಳಿದ್ದಳು. ಅನಂತರ ಮತ್ತಿಬ್ಬರು ಗಂಡು ಮಕ್ಕಳು ಹುಟ್ಟಿದರು. ಮುಂಜಾನೆ ಆರು ಗಂಟೆಗೆಲ್ಲ ಎದ್ದು ಮುಖ ತೊಳೆದು ದನಗಳ ಕೊಟ್ಟಿಗೆಗೆ ಹೋಗಿ ಸಗಣಿ ತೆಗೆದು ಅಕ್ಕಚ್ಚು ನೀಡಿ ಹುಲ್ಲನ್ನು ಹಾಕಬೇಕಿತ್ತು. ಅನಂತರ ಹಸು ಮತ್ತು ಎಮ್ಮೆಯ ಹಾಲು ಕರೆಯುವ ಕಾರ್ಯಕ್ರಮ. ಈ ಹೊತ್ತಿಗೆ ಅವರ ಪತ್ನಿ ಬರುತ್ತಿದ್ದರು. ನಾನು ಅವರನ್ನು ಚಿಕ್ಕಿ ಎಂದು ಕರೆಯುತ್ತಿದ್ದೆ. ನಾನೊಂದು ಹಸುವಿನ ಹಾಲು ಕರೆದರೆ ಅವರು ಇನ್ನೊಂದು ಹಸುವಿನ ಹಾಲು ಕರೆಯುತ್ತಿದ್ದರು. ನನಗೆ ಎಮ್ಮೆಯ ಹಾಲು ಕರೆಯುವುದು ಆರಂಭದಲ್ಲಿ...
    Read more...

    Subscribe